ನವದೆಹಲಿ: ಪ್ರತಿ ವರ್ಷ ಫೆಬ್ರವರಿ 14, ಭಾರತೀಯರ ಪಾಲಿಗೆ ಮರೆಯಲಾಗದ ಕರಾಳ ದಿನ. ಜೈಶ್-ಎ-ಮೊಹಮ್ಮದ್ಸಂ ಘಟನೆಯ ಉಗ್ರಗಾಮಿಗಳು ನಡೆಸಿದ್ದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಸೇನೆಯ ವಾಹನದಲ್ಲಿ ತೆರಳುತ್ತಿದ್ದ ಯೋಧರು ಹುತಾತ್ಮರಾಗಿದ್ದರು. ಜಮ್ಮು ಮತ್ತು ಕಾಶ್ಮೀರದಲ್ಲಿ 40 ಸಿಆರ್‌ಪಿಎಫ್ ಯೋಧರು ಪ್ರಯಾಣಿಸುತ್ತಿದ್ದ 2 ಬಸ್‌ಗಳನ್ನು ಗುರಿಯಾಗಿಸಿಕೊಂಡು ಆತ್ಮಾಹುತಿ ಬಾಂಬ್ ದಾಳಿ ನಡೆಸಲಾಗಿತ್ತು. ಇದು ಈಗಲೂ ಪ್ರತಿ ವರ್ಷ ಫೆಬ್ರವರಿ 14, ಭಾರತೀಯರ ಪಾಲಿಗೆ ಮರೆಯಲಾಗದ ದಿನ, ಕರಾಳ ದಿನ ಎಂದೇ ಹೇಳಬಹುದು.
ಫೆಬ್ರವರಿ 14, 2019 ರಂದು ಸಿಆರ್‌ಪಿಎಫ್ ಬೆಂಗಾವಲು ಪಡೆ ಮೇಲೆ ದಾಳಿ ನಡೆಸಲಾಯಿತು. ಬೆಂಗಾವಲು ಪಡೆ 78 ವಾಹನಗಳನ್ನು ಹೊಂದಿತ್ತು, ಅದರಲ್ಲಿ ಸುಮಾರು 2,500 ಸಿಆರ್‌ಪಿಎಫ್ ಸಿಬ್ಬಂದಿಗಳು ಜಮ್ಮುವಿನಿಂದ ಶ್ರೀನಗರಕ್ಕೆ ಪ್ರಯಾಣಿಸುತ್ತಿದ್ದರು. ಆತ್ಮಾಹುತಿ ಬಾಂಬರ್ ಸ್ಫೋಟಕ ತುಂಬಿದ್ದ ವಾಹನವನ್ನು ಬೆಂಗಾವಲು ಪಡೆ ವಾಹನಗಳಿಗೆ ಡಿಕ್ಕಿ ಹೊಡೆಸಿದ್ದಾರೆ. ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್ (ಜೆಇಎಂ) ಈ ಭೀಕರ ಭಯೋತ್ಪಾದನಾ ದಾಳಿಯ ಹೊಣೆಯನ್ನು ಹೊತ್ತುಕೊಂಡಿತ್ತು.
ಸ್ಫೋಟಕ ತುಂಬಿದ ವಾಹನವನ್ನು ಕೇಂದ್ರೀಯ ಮೀಸಲು ಪೊಲೀಸ್ ಪಡೆ ಬೆಂಗಾವಲು ಪಡೆಯ ಮೇಲೆ ಭೀಕರವಾಗಿ ದಾಳಿ ನಡೆಸಲಾಗಿತ್ತು. ಈ ಕರಾಳ ಘಟನೆಯ ಬಗ್ಗೆ ನೆಟ್ಟಿಗರು #BlackDay ಹೆಸರಿನಲ್ಲಿ ಪೋಸ್ಟ್ ಮಾಡಿ ವೀರ ಯೋಧರ ಬಲಿದಾನವನ್ನು ಸ್ಮರಿಸುತ್ತಿದ್ದಾರೆ.
ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಬಸ್‌ಗಳು ಹೆದ್ದಾರಿಯಲ್ಲಿ ಪ್ರಯಾಣಿಸುತ್ತಿದ್ದ ಅರೆಸೇನಾಪಡೆಯ ವಾಹನಗಳ ದೊಡ್ಡ ಗುಂಪಿನ ಭಾಗವಾಗಿತ್ತು. ದಾಳಿಯ ಸ್ವಲ್ಪ ಸಮಯದ ನಂತರ ಜೈಶ್-ಇ-ಮೊಹಮ್ಮದ್ ಸಂಘಟನೆ ವೀಡಿಯೋ ಬಿಡುಗಡೆ ಮಾಡಿತ್ತು.
ಪ್ರತಿಕಾರವಾಗಿ 12 ದಿನಗಳ ನಂತರ ಭಾರತೀಯ ವಾಯುಪಡೆಯ ಜೆಟ್‌ಗಳು ಪಾಕಿಸ್ತಾನದ ಖೈಬರ್ ಪಖ್ತುನ್‌ಖ್ವಾದಲ್ಲಿರುವ ಬಾಲಾಕೋಟ್‌ನಲ್ಲಿರುವ ಜೆಇಎಂ ಶಿಬಿರದ ಮೇಲೆ ಬಾಂಬ್ ದಾಳಿ ನಡೆಸಿತು. 12 ಮಿರಾಜ್-2000 ಜೆಟ್‌ಗಳು, ಗಡಿ ನಿಯಂತ್ರಣ ರೇಖೆಯನ್ನು ದಾಟಿ ಬಾಲಕೋಟ್‌ನಲ್ಲಿದ್ದ ಉಗ್ರಗಾಮಿ ನೆಲೆಗಳ ಮೇಲೆ ವೈಮಾನಿಕ ದಾಳಿ ಮಾಡಿತು. ಈ ವೇಳೆ ಸುಮಾರು 250 ಉಗ್ರಗಾಮಿಗಳು ಬಲಿಯಾದರು ಎಂದು ವರದಿ ಹೇಳಿತ್ತು.
ಮಾಜಿ ಸಚಿವ ಗೋಪಾಲಯ್ಯಗೆ ಕಾರ್ಪೊರೇಟರ್ ಪದ್ಮರಾಜ್ ಕೊಲೆ ಬೆದರಿಕೆ