ಇಸ್ಲಾಮಾಬಾದ್, ಫೆ 14 : ಶೆಹಬಾಜ್ ಷರೀಫ್ ಅವರು ಪಾಕಿಸ್ತಾನದ ಹೊಸ ಪ್ರಧಾನಿಯಾಗುತ್ತಾರೆ ಎಂದು ನಿರೀಕ್ಷಿಸಲಾಗಿದೆ, ಶೆಹಬಾಜ್ ಷರೀಫ್ ಮತ್ತು ಪಾಕಿಸ್ತಾನ್ ಪೀಪಲ್ಸ ಪಾರ್ಟಿಯ ಆಸಿಫ್ ಅಲಿ ಜರ್ದಾರಿ, ಮುತ್ತಹಿದಾ ಕ್ವಾಮಿ ಮೂವ್‍ಮೆಂಟ್ ಪಾಕಿಸ್ತಾನದ (ಎಂಕ್ಯೂಎಂ-ಪಿ) ಖಾಲಿದ್ ಮಕ್ಬೂಲ್ ಸಿದ್ದಿಕಿ ಪಾಕಿಸ್ತಾನ್ ಮುಸ್ಲಿಂ ಲೀಗ್-ಕ್ವೈಡ್ (ಪಿಎಂಎಲ-ಕ್ಯೂ) ನ ಶುಜಾತ್ ಹುಸೇನ್ ಅವರ ನಿವಾಸದಲ್ಲಿ ತಡರಾತ್ರಿ ಸಮಾಲೋಚನಾ ಸಭೆ ನಡೆಸಿ ಮೈತ್ರಿಕೂಟ ಸರ್ಕಾರ ರಚನೆಗೆ ಒಪ್ಪಿಗೆ ನೀಡಿವೆ ಎಂದು ವರದಿಯಾಗಿದೆ.
ಪಾಕಿಸ್ತಾನ ಮುಸ್ಲಿಂ ಲೀಗ್ ನವಾಜ್ (ಪಿಎಂಎಲ್-ಎನ್) ಅಧ್ಯಕ್ಷ ಶೆಹಬಾಜ್ ಷರೀಫ್ ಅವರನ್ನು ಮಂಗಳವಾರ ರಾತ್ರಿ ಪಾಕಿಸ್ತಾನದ ಪ್ರಧಾನಿ ಹುದ್ದೆಗೆ ಅವರ ಪಕ್ಷವು ನಾಮನಿರ್ದೇಶನ ಮಾಡಿದೆ. ಪಕ್ಷದ ವರಿಷ್ಠ ನವಾಜ್ ಷರೀಫ್ ಅವರು ತಮ್ಮ ಕಿರಿಯ ಸಹೋದರ ಶೆಹಬಾಜ್ ಷರೀಫ್ ಅವರನ್ನು ಪ್ರಧಾನಿ ಹುದ್ದೆಗೆ ಮತ್ತು ಪುತ್ರಿ ಮರ್ಯಮ್ ನವಾಜ್ ಅವರನ್ನು ಪಂಜಾಬ್ ಮುಖ್ಯಮಂತ್ರಿ ಹುದ್ದೆಗೆ ನಾಮನಿರ್ದೇಶನ ಮಾಡಿದ್ದಾರೆ ಎಂದು ಪಿಎಂಎಲ್-ಎನ್ ವಕ್ತಾರ ಮರ್ಯಮ್ ಔರಂಗಜೇಬ್ ಎಕ್ಸ್ ನಲ್ಲಿ ತಿಳಿಸಿದ್ದಾರೆ.
ನವಾಜ್ ಷರೀಫ್ ಅವರು ಪಿಎಂಎಲ್-ಎನ್ (ಮುಂದಿನ ಸರ್ಕಾರ ರಚಿಸಲು) ಬೆಂಬಲಿಸುವ ರಾಜಕೀಯ ಪಕ್ಷಗಳಿಗೆ ಧನ್ಯವಾದ ಅರ್ಪಿಸಿದ್ದಾರೆ ಮತ್ತು ಅಂತಹ ನಿರ್ಧಾರಗಳು ಪಾಕಿಸ್ತಾನವನ್ನು ಬಿಕ್ಕಟ್ಟಿನಿಂದ ಹೊರತರಲಿದೆ ಎನ್ನುವ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ ಎಂದು ಅವರು ಹೇಳಿದರು. ಪಕ್ಷ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಪಿಎಂಎಲ್-ಎನ್ ನೇತೃತ್ವದಲ್ಲಿ ಸಮ್ಮಿಶ್ರ ಸರ್ಕಾರ ರಚಿಸಲು ಪ್ರಯತ್ನಿಸುವುದಾಗಿ ಘೋಷಿಸಿದೆ.
ಪ್ರಧಾನಿ ಹುದ್ದೆಯ ಸ್ಪರ್ಧೆಯಿಂದ ಹಿಂದೆ ಸರಿಯುವುದಾಗಿ ಘೋಷಿಸಿದ ಬಿಲಾವಲ್, ತಮ್ಮ ಪಕ್ಷವು ಸರ್ಕಾರದ ಭಾಗವಾಗದೆ ಪ್ರಧಾನಿ ಹುದ್ದೆಗೆ ಪಾಕಿಸ್ತಾನ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ಅಭ್ಯರ್ಥಿಯನ್ನು ಬೆಂಬಲಿಸುತ್ತದೆ ಎಂದು ಹೇಳಿದರು. ಪಾಕಿಸ್ತಾನದ ಪ್ರಸ್ತುತ ಅಧ್ಯಕ್ಷ , ಡಾ. ಆರಿಫ್ ಅಲ್ವಿ ಮುಂದಿನ ತಿಂಗಳು ತಮ್ಮ ಹುದ್ದೆಯನ್ನು ತೊರೆಯಲಿದ್ದಾರೆ.
ಈ ಪಕ್ಷಗಳು ತಮ್ಮ ಲೆಕ್ಕಾಚಾರದಲ್ಲಿ 60 ಮಹಿಳೆಯರು ಮತ್ತು 10 ಅಲ್ಪಸಂಖ್ಯಾತ ಸ್ಥಾನಗಳನ್ನು ಸೇರಿಸಿದ ನಂತರ ಕೇಂದ್ರದಲ್ಲಿ ಸರ್ಕಾರ ರಚಿಸಲು ಅಗತ್ಯವಿರುವ ಕನಿಷ್ಠ 169 ಸಂಖ್ಯೆಯನ್ನು ಸುಲಭವಾಗಿ ಸಾಧಿಸುತ್ತವೆ ಎಂಬುದನ್ನು ಇದು ಸ್ಪಷ್ಟವಾಗಿ ತೋರಿಸುತ್ತದೆ. ಆದಾಗ್ಯೂ, ಈ ಪಕ್ಷಗಳು 336 ಸದಸ್ಯರ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಮೂರರಲ್ಲಿ ಎರಡರಷ್ಟು ಬಹುಮತವನ್ನು ಪಡೆಯಲು ಅಗತ್ಯವಿರುವ ಮುಂದಿನ ಮ್ಯಾಜಿಕ್ ಸಂಖ್ಯೆ 224 ಅನ್ನು ಪಡೆಯಲು ಸಾಧ್ಯವಾಗುತ್ತದೆಯೇ ಎಂದು ನೋಡಬೇಕಾಗಿದೆ.
ಪುಲ್ವಾಮಾ ದಾಳಿಯ ‘ಕರಾಳ ದಿನ’ಕ್ಕೆ ಇಂದಿಗೆ 5 ವರ್ಷ, ಹುತಾತ್ಮ ಯೋಧರರಿಗೆ ಕಂಬನಿ ಮಿಡಿಯುತ್ತಿದೆ ಭಾರತ