ಮೈಸೂರು,ಜೂ.17: ಬಕ್ರೀದ್ ಹಬ್ಬದ ಪ್ರಯುಕ್ತ ನರಸಿಂಹರಾಜ ಕ್ಷೇತ್ರದ ತ್ರಿವೇಣಿ ವೃತ್ತದಲ್ಲಿ ತ್ರಿವೇಣಿ ಗೆಳೆಯರ ಬಳಗದ ವತಿಯಿಂದ ಗಿಡ ನೆಟ್ಟು ಸೌಹಾರ್ದತೆಯ ಸಂದೇಶ ಸಾರಲಾಯಿತು.
ಹಿಂದೂ ಮುಸಲ್ಮಾನರು ಜೊತೆಗೂಡಿ ವಿವಿಧ ಜಾತಿಯ ಗಿಡಗಳನ್ನು ನೆಡುವ ಮೂಲಕ ನಾವೆಲ್ಲ ಒಂದು ಎಂಬ ಸಂದೇಶವನ್ನು ಸಾರಿದರು ನಂತರ ಬಕ್ರೀದ್ ಹಬ್ಬದ ಶುಭಕೋರಿದರು.
ಈ ವೇಳೆ ಮಾತನಾಡಿದ ಬಿಜೆಪಿ ಮುಖಂಡ ಬಿ ಆನಂದ್,ಇತಿಹಾಸದಲ್ಲಿ ಎರಡು ಸಮುದಾಯಗಳ ಹಬ್ಬಗಳು ಬಂದರೆ ಸೌಹಾರ್ಧವಾಗಿ ಆಚರಣೆ ಮಾಡುವ ಪದ್ಧತಿ ನಮ್ಮ ನಾಡಿನಲ್ಲಿದೆ,ಆದರೆ ಕೆಲ ಕಿಡಿಗೇಡಿಗಳಿಂದ ಎರಡು ಸಮಾಜದಲ್ಲಿ ಶಾಂತಿಯನ್ನು ಕದಡವ ಯತ್ನಗಳು ನಡೆಯುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಎರಡು ಸಮುದಾಯದ ಮುಖಂಡರು ಈ ಬಗ್ಗೆ ಲಕ್ಷ್ಯ ವಹಿಸಿ ಹಬ್ಬಗಳನ್ನು ಆಚರಣೆ ಮಾಡಲು ಮುಂದಾಗಬೇಕು. ಈ ದಿನ ಈ ಯುವಕರು ಒಟ್ಟಾಗಿ ಸೌಹಾರ್ದತೆಯಿಂದ ಹಬ್ಬವನ್ನು ಆಚರಿಸುತ್ತಾ ಬಂದಿರುವುದು ಬಹಳ ಸಂತಸದ ವಿಚಾರ, ಸೌಹಾರ್ದತೆ ಆಚರಣೆ ಪ್ರತಿ ಜಿಲ್ಲೆಯಲ್ಲಿ ನಡೆದರೆ ರಾಜ್ಯದಲ್ಲಿ ಬಹಳ ಉತ್ತಮ ಬೆಳವಣಿಗೆ ಕಾಣಲು ಸಾಧ್ಯವಿದೆ ಎಂದು ಹೇಳಿದರು.
ಮುಸಲ್ಮಾನ್ ಸಮುದಾಯದ ಯುವ ಮುಖಂಡ ಅಫ್ತಾಬ್ ಅಹಮದ್ ಮಾತನಾಡಿ,ತ್ಯಾಗ ಮತ್ತು ಬಲಿದಾನದ ಹಬ್ಬವೆಂದೇ ಕರೆಯಲಾಗುವ ಮುಸಲ್ಮಾನರ ಪವಿತ್ರ ಬಕ್ರೀದ್ ಹಬ್ಬವನ್ನು ಮುಸ್ಲಿಂ ಬಾಂದವರು ಉತ್ಸಾಹ ಮತ್ತು ಕುಟುಂಬದ ಸದಸ್ಯರೊಂದಿಗೆ ಭಾಂದವ್ಯ ಬೆಸೆದು ಆಚರಿಸುತ್ತಾರೆ ಎಂದು ತಿಳಿಸಿದರು.
ಬಿಜೆಪಿ ಮುಖಂಡ ವಾರ್ಡ್ ಅದ್ಯಕ್ಷ ಬಸವರಾಜುಮಸಳ್ಳಿ,ಪ್ರಭಣ್ಣ,ಮಣಿರತ್ನಂ,
ಕಿರಣ್ ,ಗೋವಿಂದ, ಮಹೇಶ್,ಆಪ್ತಾಬ್ ಸಲಿಮ್ ಅಕ್ಬರ್,ನಯಾಜ್, ಸುಮ, ಇರ್ಫಾನ್, ಸಮಿಉಲ್ಲಾ ಖಾನ್ ಸೇರಿದಂತೆ ಅನೇಕ ಹಿಂದೂ, ಮುಸಲ್ಮಾನ್ ಮುಖಂಡರು ಭಾಗವಹಿಸಿದ್ದರು.