Fri. Dec 27th, 2024

ವಿವಾಹ ಆಮಂತ್ರಣ ಪತ್ರಿಕೆಯಲ್ಲಿ ರಾರಾಜಿಸಿದ ಡಾ.ರಾಜ್

Share this with Friends

ಮೈಸೂರು,ಜೂ.19:ನಟಸಾರ್ವಭೌಮ ಡಾ.ರಾಜ್ ಕುಮಾರ್ ಅಗಲಿ ಸಾಕಷ್ಟು ವರ್ಷಗಳೇ ಕಳೆದಿರೂ ಅಭಿಮಾನಿಗಳ ಮನದಲ್ಲಿ ಅವರು ಹಸಿರಾಗಿದ್ದಾರೆ ಎಂಬುದಕ್ಕೆ ಇಲ್ಲೊಂದು ಉದಾಹರಣೆ ಇದೆ.

ಮೈಸೂರಿನ ನಂಜುಮಳಿಗೆ ನಿವಾಸಿ ಮಹದೇವಸ್ವಾಮಿ ಅವರು ಡಾ.ರಾಜ್ ಕುಮಾರ್ ರವರ ಕಟ್ಟಾ ಅಭಿಮಾನಿ.

ಡಾ.ರಾಜ್ ಅವರ ಹುಟ್ಟುಹಬ್ಬವಿರಲಿ,ಪುಣ್ಯತಿಥಿಯಾಗಲಿ ಯಾವುದೇ ಕಾರ್ಯಕ್ರಮವಿದ್ದರೂ ಮುಂದೆ ನಿಲ್ಲುತ್ತಾರೆ ಅಂತಹಾ ಕಟ್ಟಾ ಅಭಿಮಾನಿ ಅವರು.

ಇದೇ ಜೂನ್ 23 ರಂದು ಮಹದೇವಸ್ವಾಮಿ ಅವರ ಮಗಳು ಕಾವ್ಯ ಅವರ ವಿವಾಹ ಮಹೋತ್ಸವ ಮೈಸೂರಿನ ಸಿದ್ದಾರ್ಥನಗರದಲ್ಲಿರುವ ಕನಕ ಸಮುದಾಯ ಭವನದಲ್ಲಿ ನೆರವೇರಲಿದೆ.

ನಂಜನಗೂಡಿನ ಸುಪ್ರೀತ್.ಹೆಚ್.ಸುರೇಶ್ ರವರನ್ನ ಕಾವ್ಯ ವರಿಸಲಿದ್ದಾರೆ.ವಿವಾಹ ಮಹೋತ್ಸವದ ಆಮಂತ್ರಣ ಪತ್ರಿಕೆಯಲ್ಲಿ ಮಹದೇವಸ್ವಾಮಿ ರವರು ನೆಚ್ಚಿನ ನಟನ ಭಾವಚಿತ್ರದೊಂದಿಗೆ ಹಾಗೂ ಇಡೀ ಕುಟುಂಬದ ಆಶೀರ್ವಾದ ಕೋರಿ ಮುದ್ರಿಸಿದ್ದಾರೆ.

ಡಾ.ರಾಜ್ ದಂಪತಿ,ಪುತ್ರರಾದ ಡಾ.ಶಿವರಾಜ್ ಕುಮಾರ್ ದಂಪತಿ,ರಾಘವೇಂದ್ರ ರಾಜ್ಚಕುಮಾರ್ ದಂಪತಿ ಹಾಗೂ ಪುನೀತ್ ರಾಜ್ ಕುಮಾರ್ ದಂಪತಿಯ ಭಾವಚಿತ್ರಗಳನ್ನ ಮದುವೆ ಆಮಂತ್ರಣ ಪತ್ರ ದಲ್ಲಿ ಮುದ್ರಿಸಿ ತಮ್ಮ ಅಭಿಮಾನವನ್ನ ಮೆರೆದಿದ್ದಾರೆ.

ಜೊತೆಗೆ ಡಾ.ರಾಜ್ ಕುಮಾರ್ ಸಂಘದ ರಾಜ್ಯಾಧ್ಯಕ್ಷ ಸಾ.ರಾ.ಗೋವಿಂದು ಅವರ ಭಾವಚಿತ್ರವನ್ನೂ ಸಹ ಮುದ್ರಿಸಿದ್ದಾರೆ.

ಮಹದೇವ್ ಅವರ ಈ ಅಭಿಮಾನಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


Share this with Friends

Related Post