ದೆಹಲಿ: ಸೋನಿಯಾ ಗಾಂಧಿ ಮುಂಬರುವ ರಾಜ್ಯಸಭಾ ಚುನಾವಣೆಗೆ ರಾಜಸ್ಥಾನದಿಂದ ಬುಧವಾರ ನಾಮಪತ್ರ ಸಲ್ಲಿಸಿದ್ದಾರೆ.ಈ ವೇಳೆ ಪುತ್ರ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಜೊತೆಗಿದ್ದರು.
ಐದು ಅವಧಿಗೆ ಉತ್ತರ ಪ್ರದೇಶದ ರಾಯ್ ಬರೇಲಿಯಿಂದ ಲೋಕಸಭೆ ಸಂಸದರಾಗಿ ಸೇವೆ ಸಲ್ಲಿಸಿದ ಸೋನಿಯಾ ಗಾಂಧಿ ಅವರು ಮೊದಲ ಬಾರಿಗೆ ರಾಜ್ಯಸಭೆಗೆ ಸ್ಪರ್ಧಿಸುತ್ತಿದ್ದಾರೆ. 2019 ರಲ್ಲೇ ಅವರು ಇದು ಅವರ ಕೊನೆಯ ಲೋಕಸಭೆ ಚುನಾವಣೆ ಎಂದು ಘೋಷಿಸಿದ್ದರು. ಈ ಮೂಲಕ ಸೋನಿಯಾ ಗಾಂಧಿ ಅವರು ಲೋಕಸಭೆಗೆ ವಿದಾಯ ಹೇಳಿದ್ದಾರೆ. 25 ವರ್ಷಗಳ ನಂತರ ಅವರು ಲೋಕಸಭಾ ಸ್ಥಾನಕ್ಕೆ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ.
ಸೋನಿಯಾ ಗಾಂಧಿ ಅವರು ತಮ್ಮ ಮೊದಲ ಚುನಾವಣೆಯಲ್ಲಿ ಉತ್ತರ ಪ್ರದೇಶದ ಅಮೇಠಿ ಮತ್ತು ಕರ್ನಾಟಕದ ಬಳ್ಳಾರಿಯಿಂದ ಸ್ಪರ್ಧಿಸಿದ್ದರು. ಎರಡನ್ನೂ ಗೆದ್ದರು. 2004 ರಲ್ಲಿ ಅವರು ಕಾಂಗ್ರೆಸ್‌ನ ಎರಡನೇ ಭದ್ರಕೋಟೆಯಾಗಿದ್ದ ಯುಪಿಯ ರಾಯ್ಬರೇಲಿಯಿಂದ ಚುನಾವಣೆಗೆ ಸ್ಪರ್ಧಿಸಿದರು. 1999 ರಿಂದಲೂ ಅವರು ಲೋಕಸಭೆಯಲ್ಲಿ ಸಕ್ರಿಯರಾಗಿದ್ದಾರೆ. ಈ ಮೂಲಕ ತಮ್ಮ ಪಕ್ಷಕ್ಕೆ ಸ್ಥಿರ ಮತ್ತು ಮಾರ್ಗದರ್ಶಿ ಶಕ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
HSRP ನಂಬರ್ ಪ್ಲೇಟ್ ಅವಳಡಿಸುವ ಅವಧಿ 3 ತಿಂಗಳು ವಿಸ್ತರಣೆ
ಇನ್ನೊಂದೆ ಲೋಕಸಭೆಯಿಂದ ಸೋನಿಯಾ ಗಾಂಧಿ ನಿರ್ಗಮಿಸುತ್ತಿದ್ದಂತೆ ಅವರ ಪುತ್ರಿ ಪ್ರಿಯಾಂಕ ಗಾಂಧಿ ಹೆಸರು ಮುನ್ನಲೆಗೆ ಬರುತ್ತಿದೆ. ತಮ್ಮ ತಾಯಿಯ ಕ್ಷೇತ್ರದಿಂದ ಅವರು ಲೋಕಸಭೆಗೆ ಸ್ಪರ್ಧಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.