ಬೆಂಗಳೂರು,ಜೂ.19: ಕೆವಿನ್‌ಕೇರ್, ಮದ್ರಾಸ್ ಮ್ಯಾನೇಜ್ಮೆಂಟ್ ಅಸೋಸಿಯೇಷನ್ (ಎಂಎಂಎ), 13ನೇ ಆವೃತ್ತಿಯ ಚಿನ್ನಿಕೃಷ್ಣನ್ ಇನ್ನೋವೇಶನ್ ಅವಾರ್ಡ್ಸ್ 2024 ಪ್ರಶಸ್ತಿಗೆ ಅರ್ಜಿ ಆಹ್ವಾನಿಸಿದೆ.
ಆರ್ಥಿಕ ವರ್ಷ 2022-23ರಲ್ಲಿ ವಾರ್ಷಿಕ ವಹಿವಾಟು 50 ಕೋಟಿಗಿಂತ ಹೆಚ್ಚು ಆದಾಯ ಇಲ್ಲದ ಕಂಪನಿಗಳು https://ckinnovationawards.in/ ವೆಬ್ ಸೈಟ್ ನಲ್ಲಿ ಅಥವಾ +91 97899 60398ಗೆ ಮಿಸ್ಡ್ ಕಾಲ್ ನೀಡುವ ಮೂಲಕ ಈ ಪ್ರಶಸ್ತಿಗೆ ಅರ್ಜಿ ಸಲ್ಲಿಸಬಹುದು ಎಂದು ಸಂಸ್ಥೆ ತಿಳಿಸಿದೆ.
ನಾಮನಿರ್ದೇಶನವನ್ನು ಸಲ್ಲಿಸಲು ಕೊನೆಯ ದಿನಾಂಕ 8 ಜುಲೈ 2024. ದಿವಂಗತ ಶ್ರೀ ಚಿನ್ನಿಕೃಷ್ಣನ್ ಸ್ಮರಣಾರ್ಥವಾಗಿ ನೀಡುವ ಈ ಪ್ರಶಸ್ತಿಯನ್ನು ಅಸಾಧಾರಣ ಮತ್ತು ಪರಿಣಾಮಕಾರಿ ಆವಿಷ್ಕಾರಗಳ ಮೂಲಕ ಸಮಾಜಕ್ಕೆ ಮಹತ್ವದ ಕೊಡುಗೆ ನೀಡುವ ಸ್ಟಾರ್ಟಪ್ ಗಳು ಮತ್ತು ಮಧ್ಯಮ ಹಂತದ ಕಂಪನಿಗಳಿಗೆ ನೀಡಲಾಗುತ್ತದೆ.
ಕೆವಿನ್‌ಕೇರ್- ಎಂಎಂಎ ಚಿನ್ನಿಕೃಷ್ಣನ್ ಇನ್ನೋವೇಶನ್ ಅವಾರ್ಡ್ಸ್ ನಲ್ಲಿ ಮೂರು ವಿಭಾಗಗಳ ಅಡಿಯಲ್ಲಿ ನವೀನ ಉತ್ಪನ್ನಗಳು ಅಥವಾ ಸೇವೆಗಳ ವಿಶಿಷ್ಟತೆ ಮತ್ತು ಪ್ರಭಾವದ ಮೇಲೆ ಉದ್ಯಮದ ಶ್ರೇಷ್ಠತೆಯನ್ನು ಅಳೆಯಲಾಗುತ್ತದೆ.
ಪ್ರಶಸ್ತಿಯು ಆವಿಷ್ಕಾರಗಳ ಅನನ್ಯತೆ, ಅಳತೆ, ಸುಸ್ಥಿರತೆ ಮತ್ತು ಸಾಮಾಜಿಕ ಪ್ರಯೋಜನಗಳ ಮೇಲೆ ಗಮನ ಕೇಂದ್ರೀಕರಿಸುತ್ತದೆ.
ವಿಜೇತರಿಗೆ ರೂ.1ಲಕ್ಷ ನಗದು ಬಹುಮಾನ ನೀಡಲಾಗುತ್ತದೆ, ಜೊತೆಗೆ ಆ ಗೆದ್ದ ಕಂಪನಿ ಮಾರ್ಕೆಟಿಂಗ್, ಹಣಕಾಸು ಸೌಲಭ್ಯ, ವಿನ್ಯಾಸ ಮತ್ತಿತರ ವಿಭಾಗಗಳಲ್ಲಿ ಸಮಗ್ರ ಬೆಂಬಲ ಪಡೆಯಲಿದೆ.
ವಾರ್ಷಿಕವಾಗಿ ನೀಡಲಾಗುವ ಕೆವಿನ್‌ಕೇರ್ ಈ ಪ್ರಶಸ್ತಿಯನ್ನು ಸ್ಯಾಚೆಟ್ ಕ್ರಾಂತಿಯ ಪಿತಾಮಹ ಮತ್ತು ಕೆವಿನ್‌ಕೇರ್ ಪ್ರೈವೇಟ್ ಲಿಮಿಟೆಡ್ ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಸಿ.ಕೆ. ರಂಗನಾಥನ್ ಅವರ ತಂದೆ ದಿವಂಗತ ಆರ್. ಚಿನ್ನಿಕೃಷ್ಣನ್ ಅವರ ಸ್ಮರಣಾರ್ಥವಾಗಿ 2011ರಲ್ಲಿ ಸ್ಥಾಪಿಸಲಾಗಿದೆ.