Mon. Dec 23rd, 2024

ಪ್ರೇಮಿಗಳ ದಿನಾಚರಣೆಗೆ ‘ಯುಐʼಚಿತ್ರದ ‘ಚೀಪ್’ ಹಾಡಿನ ಪ್ರೋಮೊ ರಿಲೀಸ್

UI Movie Song
Share this with Friends

ಬೆಂಗಳೂರು : ಪ್ರೇಮಿಗಳ ದಿನಾಚರಣೆಗೆ ‘ಯುಐ’ ಚಿತ್ರದ ಚೀಪ್ ಸಾಂಗ್ ಪ್ರೋಮೋ ರಿಲೀಸ್ ಆಗಿದೆ. ಉಪ್ಪಿ ವಿಚಿತ್ರ ಹಾಡಿಗೆ ಫ್ಯಾನ್ಸ್ ಸಿಕ್ಕಾಪಟ್ಟೆ ತಲೆಕೆಡಿಸಿಕೊಂಡಿದ್ದಾರೆ.ಎಲ್ಲ ಚೀಪ್ ಚೀಪ್. ನಂದು ತುಂಬ ದೊಡ್ಡದು. ಅವನಿಗಿಂತ ನಿಂದು ಚಿಕ್ಕದು. ನಿಂದು ತುಂಬ ಚಿಕ್ಕದು. ಇವನಿಗಿಂತ ಅವನ್ದು ದೊಡ್ಡದು. ಎಲ್ಲ ಚೀಪ್ ಚೀಪ್..’ ಎಂಬ ಸಾಲುಗಳು ಈ ಹಾಡಿನಲ್ಲಿದ್ದು, ಸಾಂಗ್ ಕೇಳಿದ ಅಭಿಮಾನಿಗಳು ಸಿಕ್ಕಾಪಟ್ಟೆ ತಲೆಕೆಡಿಸಿಕೊಂಡಿದ್ದಾರೆ.

ಅಜನೀಶ್ ಬಿ. ಲೋಕನಾಥ್ ಅವರು ಈ ಸಿನಿಮಾಗೆ ಸಂಗೀತ ನೀಡಿದ್ದಾರೆ. ವಿಜಯ್​ ಪ್ರಕಾಶ್​, ನಕಾಶ್​ ಅಜೀಜ್​, ದೀಪಕ್​ ಬ್ಲ್ಯೂ ಅವರು ‘ಚೀಪ್​’ ಹಾಡಿಗೆ ಧ್ವನಿ ನೀಡಿದ್ದಾರೆ. ಉಪೇಂದ್ರ ಅವರು ಸ್ವಲ್ಪ ವಿಚಿತ್ರವಾಗಿ ಸಾಹಿತ್ಯ ಬರೆದಿದ್ದಾರೆ.

ಚಿನ್ನಿ ಪ್ರಕಾಶ್​ ಅವರು ಈ ಹಾಡಿಗೆ ಕೊರಿಯೋಗ್ರಫಿ ಮಾಡಿದ್ದಾರೆ. ಸದ್ಯಕ್ಕೆ ಬಿಡುಗಡೆ ಆಗಿರುವುದು ಪ್ರೋಮೋ ಮಾತ್ರ. ಫೆಬ್ರವರಿ 26ರಂದು ಫುಲ್​ ಹಾಡು ಬಿಡುಗಡೆ ಆಗಲಿದೆ. ಈ ಸಿನಿಮಾಗೆ ಜಿ. ಮನೋಹರನ್​ ಮತ್ತು ಕೆ.ಪಿ. ಶ್ರೀಕಾಂತ್​ ಅವರು ಬಂಡವಾಳ ಹೂಡಿದ್ದಾರೆ. ನವೀನ್​ ಮನೋಹರನ್​ ಸಹ-ನಿರ್ಮಾಪಕರಾಗಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಈ ಸಿನಿಮಾದ ಟೀಸರ್​ ಭಾರಿ ಕುತೂಹಲ ಮೂಡಿಸಿತ್ತು.


Share this with Friends

Related Post