Thu. Dec 26th, 2024

ಪ್ರತಿದಿನ ಮನೆಯಲ್ಲಿ ಎಲ್ಲರೂ ಯೋಗಾಭ್ಯಾಸ ಮಾಡಿ: ಎನ್ ಮಹೇಶ್ ಸಲಹೆ

Share this with Friends

ಮೈಸೂರು,ಜೂ.21:ಯೋಗ ಒಂದು ದಿನಕ್ಕೆ ಮಾತ್ರ ಸೀಮಿತವಾಗಬಾರದು ಪ್ರತಿದಿನ ಎಲ್ಲರೂ ತಮ್ಮ ಮನೆಯಲ್ಲಿ ಯೋಗಾಭ್ಯಾಸ ಮಾಡಿದರೆ ದೈನಂದಿನ ಜೀವನ ಉಲ್ಲಾಸಕರವಾಗಿರುತ್ತದೆ ಎಂದು ಮಾಜಿ ಸಚಿವ ಎನ್ ಮಹೇಶ್ ಹೇಳಿದರು

ಮೈಸೂರು ನಗರ ಬಿಜೆಪಿ ಯುವ ಮೋರ್ಚಾ ತಂಡ ಪಕ್ಷದ ಕಚೇರಿ ಮುಂಭಾಗ ಹಮ್ಮಿಕೊಂಡಿದ್ದ ವಿಶ್ವ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಮನೆಯಲ್ಲಿ ಹಿರಿಯರಿಂದ ಹಿಡಿದು ಮಕ್ಕಳೂ ಕೂಡಾ ಯೋಗಭ್ಯಾಸ ಮಾಡಲೇಬೇಕು ಇದರಿಂದ ಆರೋಗ್ಯ ಹಾಗೂ ದೇಹದ ನರನಾಡಿಗಳು ಉತ್ತಮಕಾರಿಯಾಗಿ ಸಹಕರಿಸುತ್ತವೆ ಎಂದು ತಿಳಿಸಿದರು.

ಮಾಜಿ ಶಾಸಕ ನಿರಂಜನ್ ಕುಮಾರ್ ಮಾತನಾಡಿ, ಭಾರತ ಇಡೀ ಪ್ರಪಂಚಕ್ಕೆ ಯೋಗವನ್ನು ತೋರಿಸಿ ಕೊಡುವ ಮುಖಾಂತರ ವಿಶ್ವ ಗುರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ, ಪ್ರಧಾನಿ ನರೇಂದ್ರ ಮೋದಿಜಿ ಅವರು ಯೋಗವನ್ನು ಮಾಡುವ ಮುಖಾಂತರ ಜಗತ್ತಿನ ಪ್ರತಿಯೊಬ್ಬರ ಗಮನ ಸೆಳೆದಿದ್ದಾರೆ ಜೊತೆಗೆ ಆರೋಗ್ಯಕರ ಭಾರತ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ತಿಳಿಸಿದರು.

ಮೈಸೂರು ಜಿಲ್ಲಾ ಅಧ್ಯಕ್ಷ ಎಲ್. ಆರ್ ಮಹದೇವಸ್ವಾಮಿ,ಯೋಗ ಶಿಕ್ಷಕರಾದ ಮುತ್ತಣ್ಣ ಬಿಡಣಾಳು , ಮೈಸೂರು ನಗರ ಯುವಮೊರ್ಚಾ ಅಧ್ಯಕ್ಷ ರಾಕೇಶ್ ಗೌಡ,ನಗರ ಉಪಾಧ್ಯಕ್ಷ ಜೋಗಿ ಮಂಜು, ಪ್ರಧಾನ ಕಾರ್ಯದರ್ಶಿ ಸಚ್ಚಿನ್,ಲೋಹಿತ್,
ಮಧು,ನಿಶಾಂತ್,ಅರ್ಜನ್,ದೇವರಾಜ್, ಗಜೇಂದ್ರ, ರಂಗಸ್ವಾಮಿ ಮತ್ತಿತರರು ಪಾಲ್ಗೊಂಡಿದ್ದರು.


Share this with Friends

Related Post