Fri. Nov 1st, 2024

ಜಯಪ್ರದಾ ಬಂಧಿಸಿ ಫೆ. 27 ಕ್ಕೆಕೋರ್ಟ್ ಗೆ ಹಾಜರುಪಡಿಸಲು ಆದೇಶ

Share this with Friends

ಮುಂಬೈ,ಫೆ.14: ಮಾಜಿ ಸಂಸದೆ, ನಟಿ ಜಯಪ್ರದಾ ಅವರನ್ನು ಬಂಧಿಸಿ ಫೆ. 27 ಕ್ಕೆ ಕೋರ್ಟ್ ಗೆ ಹಾಜರುಪಡಿಸುವಂತೆ ರಾಂಪುರ ನ್ಯಾಯಾಲಯ ಆದೇಶ ನೀಡಿದೆ.

ಪೊಲೀಸ್ ವರಿಷ್ಠಾಧಿಕಾರಿಗೆ ರಾಂಪುರ ನ್ಯಾಯಾಲಯ ಆದೇಶಿಸಿದೆ.

ಈ ಮೊದಲು ಕೋರ್ಟ್ ಜಯಪ್ರದಾ ಅವರನ್ನು ಜ.10ರೊಳಗೆ ಬಂಧಿಸಿ ಕೋರ್ಟಿಗೆ ಹಾಜರು ಪಡಿಸಲು ಸೂಚಿಸಿತ್ತು.ಆದರೆ, ಪೊಲೀಸರ ಕೈಗೆ ಸಿಗದೆ ಜಯಪ್ರದಾ ತಪ್ಪಿಸಿಕೊಂಡಿದ್ದರು.

ಹಾಗಾಗಿ ಕೋರ್ಟ್ ಪೊಲೀಸರಿಗೆ ಈ ಬಾರಿ ಕಠಿಣ ಎಚ್ಚರಿಕೆ ನೀಡಿ, ಫೆಬ್ರವರಿ 27ರಂದು ಬಂಧಿಸಿ ಕೋರ್ಟಿಗೆ ಹಾಜರು ಪಡಿಸುವಂತೆ ಸೂಚಿಸಿದೆ.

ಜತೆಗೆ ವಿಶೇಷ ತಂಡ ರಚಿಸಿ ಬಂಧಿಸುವಂತೆ ಪೊಲೀಸ್ ವರಿಷ್ಠಾಧಿಕಾರಿಗೆ ಆದೇಶಿಸಿದೆ.

2019ರ ಎರಡು ಪ್ರಕರಣಗಳಲ್ಲಿ ಜಯಪ್ರದಾ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಲಾಗಿದೆ. ಅವರು 2019ರ ಲೋಕಸಭೆ ಚುನಾವಣೆಯಲ್ಲಿ ರಾಂಪುರದಿಂದ ಬಿಜೆಪಿ ಟಿಕೆಟ್‌ನಲ್ಲಿ ಸ್ಪರ್ಧಿಸಿದ್ದರು. ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದ ಎರಡು ಪ್ರಕರಣಗಳಲ್ಲಿ ನಟಿ ತಲೆಮರೆಸಿಕೊಂಡಿದ್ದಾರೆ.

ಹಿರಿಯ ಪ್ರಾಸಿಕ್ಯೂಷನ್ ಅಧಿಕಾರಿ ಅಮರನಾಥ್ ತಿವಾರಿ ಅವರು ಏಳನೇ ಬಾರಿಗೆ ಜಾಮೀನು ರಹಿತ ವಾರೆಂಟ್ ಹೊರಡಿಸಿದ ನಂತರವೂ ಜಯಪ್ರದಾ ವಿಚಾರಣೆಗೆ ಬಂದಿರಲಿಲ್ಲ.

ಜಯಪ್ರದಾ ವಿವಾದಕ್ಕೆ ಸಿಲುಕುತ್ತಿರುವುದು ಇದು ಮೊದಲೇನಲ್ಲ. ಕಳೆದ ವರ್ಷ ಚೆನ್ನೈನ ನ್ಯಾಯಾಲಯವು ಹಳೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿಯನ್ನು ತಪ್ಪಿತಸ್ಥರೆಂದು ಘೋಷಿಸಿತ್ತು.


Share this with Friends

Related Post