ಮೈಸೂರು,ಜೂ.21: ತಂದೆ-ತಾಯಿ ಹಾಗೂ ಗುರುಗಳು ಒಬ್ಬ ವ್ಯಕ್ತಿಯ ಬದುಕಿನಲ್ಲಿ ಮುಖ್ಯ ಪಾತ್ರವನ್ನು ವಹಿಸುತ್ತಾರೆ ಎಂದು ಕಿರುತರೆ- ಹಿರಿತೆರೆ ನಟ ವಿಕ್ರಮ್ ತಿಳಿಸಿದರು.
ನಗರದ ಸರಸ್ವತಿಪುರಂನಲ್ಲಿರುವ ಟಿ.ಟಿ.ಎಲ್.ಟ್ರಸ್ಟ್ (ರಿ) ಹಾಗೂ ಟಿ.ಟಿ.ಎಲ್. ಪದವಿ ಪೂರ್ವ ಕಾಲೇಜು ಏರ್ಪಡಿಸಿದ್ದ ಕ್ರೀಡಾ ಮತ್ತು ಸಾಂಸ್ಕೃತಿಕ ವೇದಿಕೆಗಳ ಉದ್ಘಾಟನಾ ಸಮಾರಂಭ ಮತ್ತಿತರ ಕಾರ್ಯಕ್ರಮದಲ್ಲಿ ಕಾಲೇಜಿನ ಅಲ್ಯುಮಿನಿ ವಿದ್ಯಾರ್ಥಿಯೂ ಆದ ವಿಕ್ರಮ್ ಪಾಲ್ಗೊಂಡು ಮಾತನಾಡಿದರು.
ತಂದೆ,ತಾಯಿ,ಗುರು,ಹಿರಿಯರಿಗೆ ಗೌರವ ಸಲ್ಲಿಸುವುದನ್ನು ನಾವು ಪಾಲಿಸಬೇಕು ಎಂದು ವಿದ್ಯಾಥಿಗಳಿಗೆ ಮನವರಿಕೆ ಮಾಡಿಕೊಟ್ಟರು.
ಟಿ.ಟಿ.ಎಲ್ ಪದವಿ ಕಾಲೇಜಿನ ಪ್ರಾಂಶುಪಾಲ
ಡಾ.ಬಿ.ವಿ.ಪ್ರಶಾಂತ್ ರವರು ಸಾಂಸ್ಕೃತಿಕ ಮತ್ತು ಕ್ರೀಡೆಯ ಬಗ್ಗೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನಿಡಿದರು. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದ ಜೊತೆಗೆ ಇತರೆ ಚಟುವಟಿಕೆಗಳಲ್ಲಿ ಭಾಗವಹಿಸಿ ಅವರಲ್ಲಿರುವ ಹವ್ಯಾಸಗಳನ್ನು ಮುಂದುವರೆಸುವಂತೆ ಸಲಹೆ ನೀಡಿದರು.
ಟಿ.ಟಿ.ಎಲ್ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಇಂಗ್ಲಿಷ್ ಉಪನ್ಯಾಸಕ ಡಾ.ಮೋಹನ್ ರವರು ವಿದ್ಯಾರ್ಥಿಗಳು ಗುರುಗಳೊಂದಿಗೆ ಬೆರೆಯತ್ತಾ ವಿದ್ಯಾಭ್ಯಾಸವನ್ನು ಮಾಡಬೇಕೆಂದು ತಿಳಿಸಿದರು.
ಸಂಧ್ಯಾ ಎಂ ರಾವ್ ಡಾ.ಆಶಾ, ಎನ್.,
ಶರ್ಮಾ, ಟಿ.ಟಿ.ಎಲ್ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಭ್ರಮರಾಂಭ ಎಸ್. ಇಂಗ್ಲಿಷ್ ಉಪನ್ಯಾಸಕ ಡಾ.ಮೋಹನ್, ಪದವಿ ಕಾಲೇಜಿನ ಹಿರಿಯ ವಾಣಿಜ್ಯ ಶಾಸ್ತ್ರದ ಉಪನ್ಯಾಸಕ ಪ್ರೊ.ಎನ್.ಎಂ.ರಾಮಚಂದ್ರಯ್ಯ, ಸಹ ಪ್ರಾದ್ಯಾಪಕರಾದ ಕರುಣ್ ಶರ್ಮ, ಯುವ ರೆಡ್ ಕ್ರಾಸ್ ಘಟಕದ ಸಂಚಾಲಕ ಹೆಚ್.ಆರ್.ಗಿರೀಶ್ ಮತ್ತಿತರರು ಹಾಜರಿದ್ದರು.