Wed. Dec 25th, 2024

ಸೂರಜ್ ಬಗ್ಗೆ ನನ್ನ ಏನೂ ಕೆಳಬೇಡಿ: ಹೆಚ್‌ಡಿಕೆ ಕಡಕ್ ನುಡಿ

Share this with Friends

ಬೆಂಗಳೂರು,ಜೂ.22: ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ವಿರುದ್ಧ ಅಸಹಜ ಲೈಂಗಿಕ ದೌರ್ಜನ್ಯ ಆರೋಪ ಸಂಬಂಧ ನನ್ನನ್ನ ಏನೂ ಕೇಳಬೇಡಿ‌ ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಗರಂ‌ ಆಗಿ ನುಡಿದರು.

ಬೆಂಗಳೂರಿನ ಕೆಂಪೇಗೌಡ ಏರ್‌ಪೋರ್ಟ್‌ ಬಳಿ ಮಾಧ್ಯಮಗಳು ಸೂರಜ್ ಕುರಿತು ಪ್ರಶ್ನಿಸಿದಾಗ ಹೆಚ್ ಡಿ ಕೆ ಕೋಪದಿಂದಲೇ ಪ್ರತಿಕ್ರಿಯಿಸಿದರು.

ದಯವಿಟ್ಟು ಇಂತಹ ವಿಷಯಗಳನ್ನ ನನ್ನ ಬಳಿ ಚರ್ಚೆ ಮಾಡಬೇಡಿ, ರಾಜ್ಯದ ಸಮಸ್ಯೆಗಳಿಗೆ ಸಂಬಂಧಪಟ್ಟ ವಿಚಾರಗಳನ್ನು ಮಾತ್ರ ಚರ್ಚೆ ಮಾಡಿ ಎಂದು ಕಡಕ್ ಆಗಿ ಹೇಳಿದರು.

ಸೂರಜ್ ವಿಷಯ ನನ್ನ ಪ್ರಶ್ನೆ ಮಾಡುವ ಅವಶ್ಯಕತೆ ಏನಿದೆ, ಕಾನೂನು ಇದೆ ಕಾನೂನಿನ ಅಡಿ ಎಲ್ಲವೂ ನಡೆಯಲಿದೆ, ನನ್ನ ಬಳಿ ಆ ರೀತಿ ಪ್ರಶ್ನೆಗಳನ್ನ ಕೇಳಬೇಡಿ ಎಂದು ತಿಳಿಸಿದರು.


Share this with Friends

Related Post