Tue. Dec 24th, 2024

ರಾಮಕೃಷ್ಣ ನಗರದ ವಾಯು ವಿಹಾರಿಗಳಿಂದ ಯೋಗ ದಿನಾಚರಣೆ

Share this with Friends

ಮೈಸೂರು, ಜೂ.22: ಮೈಸೂರಿನ ರಾಮಕೃಷ್ಣ ನಗರದ ಐ ಬ್ಲಾಕ್ ನ ರಾಮಕೃಷ್ಣ ಪಾರ್ಕ್ ನಲ್ಲಿ ಲಯನ್ಸ್ ಕ್ಲಬ್ ಕುವೆಂಪುನಗರ, ಯೋಗ ಸನ್ನಿದಿ ಬಳಗ ಮತ್ತು ಮಹದೇವ್ ಗಣೇಶ್ ತಂಡದವರು ವಿಶ್ವ ಯೋಗ ದಿನಾಚರಣೆ ಆಚರಿಸಿದರು.

ಈ ವೇಳೆ ಎಲ್ಲರಿಗೂ ಯೋಗಪಟುಗಳು ವಿವಿಧ ಯೋಗಾಸನಗಳನ್ನು ಹೇಳಿಕೊಟ್ಟರು.

ಕಾರ್ಯಕ್ರಮದಲ್ಲಿ ಲಯನ್ ಡಿ.ಎನ್ ನಾಗರಾಜ ಆಚಾರ್, ಲಯನ್ ಶಿವರಾಮು, ಲಯನ್ ವಿ.ಟಿ ಚಂದ್ರಶೇಖರ್ ಮತ್ತು ಲಯನ್ ಆರ್. ಎಚ್ ನಾಗರಾಜ್, ರಾಮ ಕೃಷ್ಣ ಪರಮಹಂಸ ಉದ್ಯಾನವನದ ವಾಯು ವಿಹಾರಿಗಳಾದ ಮಂಡ್ಯ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಚಲುವಯ್ಯ, ಕೃಷ್ಣಪ್ಪ,ವೆಂಕಟೇಶ್, ಜಯರಾಮ್ ಮತ್ತು ಯೋಗಪಟುಗಳಾದ ನಿಂಗೇಗೌಡ,ಗಣೇಶ್ ಸಂಗಡಿಗರು ಮಹಿಳಾ ಪಟುಗಳು ಭಾಗವಹಿಸಿದ್ದರು.


Share this with Friends

Related Post