Tue. Dec 24th, 2024

ನಾಡೋಜ ಕಮಲಾ ಹಂಪನಾ ವಿಧಿವಶ

Share this with Friends

ಬೆಂಗಳೂರು, ಜೂ.22: ಕನ್ನಡದ ಖ್ಯಾತ ಲೇಖಕಿ ನಾಡೋಜ ಕಮಲ ಹಂಪನ ನಿಧನ ಹೊಂದಿದ್ದಾರೆ.

ಅವರಿಗೆ 89 ವರ್ಷಗಳಾಗಿತ್ತು, ಕಮಲ ಹಂಪನ ನಿಧನದಿಂದ ಕನ್ನಡ ಸಾರಸ್ವತ ಲೋಕದ ಕೊಂಡಿ ಕಳಚಿದಂತಾಗಿದೆ.

ನಿನ್ನೆ ತಡ ರಾತ್ರಿ ಅವರಿಗೆ ತೀವ್ರ ಹೃದಯಾಘಾತ ವಾಗಿತ್ತು, ಹಾಗಾಗಿ ಬೆಂಗಳೂರಿನ ಎಂ ಎಸ್ ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದರೂ ಚಿಕಿತ್ಸೆ ಫಲ ಕಾರಿಯಾಗದೆ ಎಂದು ಬೆಳಗ್ಗೆ ನಿಧನ ಹೊಂದಿದ್ದಾರೆ.

ಕಮಲ ಅವರು ಕನ್ನಡದ ಲೇಖಕಿಯಾಗಿ ಪ್ರಸಿದ್ಧರಾಗಿದ್ದರು ಅವರು ಮೈಸೂರು, ಬೆಂಗಳೂರಿನ ಮಹಾರಾಣಿ ಕಾಲೇಜು ಸೇರಿದಂತೆ ಹಲವು‌ ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿ ಕೆಲಸ ನಿರ್ವಹಿಸಿದ್ದರು.

2003ರಲ್ಲಿ ಮೂಡುಬಿದಿರೆಯಲ್ಲಿ ನಡೆದ 71ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕಮಲ ಹಂಪನ ಅಧ್ಯಕ್ಷರಾಗಿದ್ದರು.

ನಕ್ಕಿತು ಹಾಲಿನ ಬಟ್ಟಲು, ರೆಕ್ಕೆ ಮರಿದಿತ್ತು, ಚಂದನಾ, ಬಣವೆ ಸೇರಿದಂತೆ ಹಲವಾರು ಸಾಹಿತ್ಯ ಕೃತಿಗಳನ್ನು ಕಮಲ ಹಂಪನ ರಚಿಸಿದ್ದಾರೆ, ಬೇರು ಬೆಂಕಿ ಬಿಳಲು ಎಂಬ ಬೃಹದ್ ಗ್ರಂಥವನ್ನು ಕಮಲ ಹಂಪನ ರಚಿಸಿದ್ದಾರೆ.

ಕಮಲಾ ಹಂಪನಾ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಪ್ರತಿಪಕ್ಷದ ನಾಯಕರು ಸಾಹಿತ್ಯಾಸಕ್ತರು, ಸಾಹಿತ್ಯಾ ಭಿಮಾನಿಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ಧಾರೆ.


Share this with Friends

Related Post