ಬೆಂಗಳೂರು : ರಾಜ್ಯ ಸರ್ಕಾರ ಇತ್ತಿಚೇಗಷ್ಟೇ ಡೀಸೆಲ್ ಮತ್ತು ಪೆಟ್ರೋಲ್ ಮೇಲೆ ತೆರಿಗೆ ಏರಿಕೆ ಮಾಡಿ ಜನರಿಗೆ ದುಬಾರಿ ದುನಿಯಾದ ದರ್ಶನ ಮಾಡಿಸುತ್ತಿರುವ ಸಿದ್ದು ನೇತೃತ್ವದ ರಾಜ್ಯ ಸರ್ಕಾರ ಈಗ ನಂದಿನಿ ಹಾಲಿನ ದರವನ್ನು ಏರಿಕೆ ಮಾಡುವ ಮೂಲಕ ಜನಸಾಮಾನ್ಯರ ಬದುಕಿಗೆ ಆಘಾತ ನೀಡಿದ್ದಾರೆ.
ನಂದಿನಿ ಹಾಲಿನ ದರವನ್ನು ಪ್ರತಿ ಲೀಟರ್’ಗೆ 2.10 ರೂ ಹೆಚ್ಚಳ ಮಾಡಿ ಕರ್ನಾಟಕ ಸಹಕಾರ ಹಾಲು ಮಹಾ ಮಂಡಳ (ಕೆಎಂಎಫ್) ಆದೇಶಿಸಿದ್ದು ಪರಿಷ್ಕೃತ ದರ ಬುಧವಾರದಿಂದಲೇ ಜಾರಿಗೆ ಬರಲಿದೆ. ಬೆಲೆ ಏರಿಕೆಯ ನಂತರ 1000 ಎಂಎಲ್ ಪ್ಯಾಕೇಟ್ ಹಾಲಿಗೆ ಹೆಚ್ಚುವರಿಯಾಗಿ 50ಎಂಎಲ್ ಸೇರಿಸಿ 44ರೂ ಬದಲಿಗೆ 46 ರೂ ದರ ನಿಗದಿ ಮಾಡಿದ್ದು, 500 ಎಂಎಲ್ ಪ್ಯಾಕೇಟ್ ಹಾಲಿಗೆ 50 ಎಂಎಲ್ ಹಾಲು ಹೆಚ್ಚುವರಿಯಾಗಿ ಸೇರಿಸಿ 22ರೂ ಇದ್ದ ದರವನ್ನು 24 ರೂಗೆ ನಿಗದಿ ಮಾಡಲಾಗಿದೆ. ಇನ್ನುಳಿದಂತೆ ಯಾವುದೇ ಉತ್ಪನ್ನಗಳ ಬೆಲೆ ಏರಿಕೆ ಮಾಡಿಲ್ಲ.