Tue. Dec 24th, 2024

ಮಂಗಳ ಮುಖಿಯರ ಉಪಟಳ‌: ಅಪ್ರಾಪ್ತ ಆತ್ಮಹತ್ಯೆ

Share this with Friends

ಮೈಸೂರು,ಜೂ.25: ಮಂಗಳಮುಖಿಯರ ಕಿರುಕುಳದಿಂದ ಮನನೊಂದ ಅಪ್ರಾಪ್ತ ವಯಸ್ಸಿನ ಬಾಲಕ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಹುಣಸೂರು ತಾಲೂಕಿನ ಹೆಜ್ಜೂರು ಗ್ರಾಮದಲ್ಲಿ ನಡೆದಿದೆ.

ರಾಹುಲ್ ಮೌರ್ಯ(17) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ

ಹುಣಸೂರಿನ ಕಿರಜಾಜಿ ಸರ್ಕಲ್ ಬಳಿ ಎಳೆನೀರು ವ್ಯಾಪಾರ ಮಾಡುತ್ತಿದ್ದ ರಾಹುಲ್ ಮೌರ್ಯ ಮಂಗಳಮುಖಿಯ ಜೊತೆ ಆಗಾಗ ಮಾತನಾಡುತ್ತ ಸ್ನೇಹ ಬೆಳೆಸಿದ್ದ.

ನಾಲ್ಕು ತಿಂಗಳ ಹಿಂದೆ ಇದ್ದಕ್ಕಿದ್ದಂತೆ ರಾಹುಲ್ ಮೌರ್ಯ ನಾಪತ್ತೆಯಾಗಿದ್ದ,ಆದರೆ ಆಗಾಗ ತನ್ನ ತಾಯಿ ಜೊತೆ ಮೊಬೈಲ್ ನಲ್ಲಿ ಮಾತನಾಡುತ್ತಿದ್ದನೇ ಹೊರತು ತಾನು ಎಲ್ಲಿದ್ದೇನೆಂದು ಹೇಳುತ್ತಿರಲಿಲ್ಲ.

ಜೂನ್ 21 ರಂದು ರಾಹುಲ್ ಮೌರ್ಯ ಹೆಜ್ಜೂರು ಗ್ರಾಮದ ತನ್ನ ದೊಡ್ಡಮ್ಮನ ಮನೆಗೆ ಬಂದಿದ್ದಾನೆ.ಜೂನ್ 23 ರಂದು ಕೆಲವು ಮಂಗಳಮುಖಿಯರು ಕಿರಜಾಜಿಯಲ್ಲಿರುವ ರಾಹುಲ್ ಮೌರ್ಯ ಮನೆಗೆ ಬಂದು ರಾಹುಲ್ ನಮ್ಮ ಹುಡುಗಿಯೊಬ್ಬಳನ್ನ ಕರೆದೊಯ್ದಿದ್ದಾನೆ ಎಂದು ಆರೋಪಿಸಿ ಜಗಳ ಮಾಡಿ ಹೋಗಿದ್ದಾರೆ.

ಅದೇ ದಿನ ಸಂಜೆ ಹೆಜ್ಜೂರು ಗ್ರಾಮದ ಜಮೀನಿನಲ್ಲಿರುವ ಬಿದಿರುಶೆಡ್ ನಲ್ಲಿ ರಾಹುಲ್ ಮೌರ್ಯ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಈ ಎಲ್ಲಾ ಘಟನೆಯಿಂದ ಮನನೊಂದು ತಮ್ಮ ಮಗ ಆತ್ಮಹತ್ಯೆಗೆ ಮಾಡಿಕೊಂಡಿದ್ದಾನೆ ಎಂದು ತಂದೆ ಕುಮಾರ್ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.


Share this with Friends

Related Post