Fri. Nov 1st, 2024

ತುರ್ತು ಪರಿಸ್ಥಿತಿಯಿಂದ ಆದ‌ ಅನಾಹುತ:ಪೋಸ್ಟರ್‌ ಅಭಿಯಾನ

Share this with Friends

ಮೈಸೂರು, ಜೂ.26: ತುರ್ತು ಪರಿಸ್ಥಿತಿ ಜಾರಿಯಾದಾಗ ದೇಶದಲ್ಲಿ ಆಗಿದ್ದ‌ ಅನಾಹುತಗಳ ಬಗ್ಗೆ ಜನರಿಗೆ ತಿಳಿಸಲು
ಬಿಜೆಪಿ ಮೈಸೂರು ನಗರದ ಯುವ ಮೋರ್ಚಾ ಪೋಸ್ಟರ್ ಅಭಿಯಾನ ಹಮ್ಮಿಕೊಂಡಿದೆ.

ತುರ್ತು ಪರಿಸ್ಥಿತಿ ಜಾರಿಯಾದಾಗ ಅಂದು ದೇಶದ ಸಂವಿಧಾನದ ಮೇಲೆ ಅದ ಅಪಚಾರ, ಪ್ರತಿಪಕ್ಷದ ನಾಯಕರು ಹಾಗೂ ಹೋರಾಟಗಾರರ ಮೇಲಾದ ದೌರ್ಜನ್ಯವನ್ನು ನೆನೆದು, ಮತ್ತೆ ಅಂತಹ ದೌರ್ಜನ್ಯ ದೇಶದಲ್ಲಿ ಮರುಕಳಿಸದಿರಲಿ ಎಂಬ ಉದ್ದೇಶದಿಂದ ಜನರನ್ನು ಜಾಗೃತಗೊಳಿಸಲು ಮತ್ತು ಸಂವಿಧಾನದ ತಿದ್ದುಪಡಿ ಮಾಡಿ ಅಪಾಯ ತಂದಿದ್ದು ಯಾವ ಪಕ್ಷ ಎಂಬುದನ್ನು ಜನರಿಗೆ ಮನಗಾಣಿಸಲು ಈ ಅಭಿಯಾನ ಹಮ್ಮಿಕೊಳ್ಳಲಾಯಿತು.

ಬಿಜೆಪಿ ಚಾಮುಂಡೇಶ್ವರಿ ನಗರ ಮಂಡಲದ ಯುವ ಮೋರ್ಚಾ ವತಿಯಿಂದ ಇಂದು ತುರ್ತು ಪರಿಸ್ಥಿತಿಯ ಪೋಸ್ಟರ್ ಅಭಿಯಾನವನ್ನು ನಿವೇದಿತಾ ನಗರದ ಸುಬ್ಬರಾವ್ ಉದ್ಯಾನವನದ ಬಳಿಯ ಬಸ್ ನಿಲ್ದಾಣದಲ್ಲಿ ಚಾಲನೆ ನೀಡಲಾಯಿತು.

ಜನಸಂದಣಿ ಇರುವ ಪ್ರಮುಖ ಜಾಗಗಳಲ್ಲಿ ಪೋಸ್ಟರ್ ಗಳನ್ನು ಅಂಟಿಸಲಾಯಿತು.

ಅಭಿಯಾನದಲ್ಲಿ ಚಾಮುಂಡೇಶ್ವರಿ ನಗರ ಮಂಡಲ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಮಧು ಸೋಮಶೇಖರ್, ಯುವ ಮೋರ್ಚಾ ನಗರ ಅಧ್ಯಕ್ಷ ರಾಕೇಶ್ ಗೌಡ, ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಈರೇಗೌಡ, ಆರ್.ಸೋಮಶೇಖರ್, ನಗರ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಲೋಹಿತ್, ಮಂಡಲದ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಎಸ್. ಸಾಗರ್ ಸಿಂಗ್, ಚಂದನ್ ಗೌಡ, ಎಸ್ ಸಿ ಮೋರ್ಚಾದ ರಾಹುಲ್, ಮಂಡಲ ಉಪಾಧ್ಯಕ್ಷ ಶಿವಕುಮಾರ್, ಪದಾಧಿಕಾರಿಗಳಾದ ಶಿವು, ಮನು, ರಕ್ಷಿತ್, ಮಹೇಶ್, ಭರತ್, ಸೂರಜ್ ಮತ್ತಿತರರು ಪಾಲ್ಗೊಂಡಿದ್ದರು.


Share this with Friends

Related Post