Fri. Nov 1st, 2024

ಕೆಂಪೇಗೌಡ ಜಯಂತಿ: ಜೀವಧಾರ ರಕ್ತನಿಧಿ ಕೇಂದ್ರದಿಂದ ಹೋಳಿಗೆ ವಿತರಣೆ

Share this with Friends

ಮೈಸೂರು,ಜೂ.27: ಸಾಂಸ್ಕೃತಿಕ ನಗರಿಯಲ್ಲಿ ನಾಡಪ್ರಭು ಕೆಂಪೇಗೌಡರ 515 ನೇ ಜಯಂತಿ ಪ್ರಯುಕ್ತ ಸಾರ್ವಜನಿಕರಿಗೆ ಹೋಳಿಗೆ ವಿತರಿಸಲಾಯಿತು.

ಜೀವಧಾರ ರಕ್ತನಿಧಿ ಕೇಂದ್ರ ಹಾಗೂ ಕೆ ಎಂ ಪಿ ಕೆ ಟ್ರಸ್ಟ್ ವತಿಯಿಂದ ಅರಮನೆ ಕೋಟೆ ಆಂಜನೇಯ ದೇವಸ್ಥಾನದ ಮುಂಭಾಗ
ಜಿಲ್ಲಾಡಳಿತ ವತಿಯಿಂದ ಆಯೋಜಿಸಿದ್ದ ಕೆಂಪೇಗೌಡ ಜಯಂತಿಯ ಮೆರವಣಿಗೆ ವೇಳೆ 2,000 ಹೋಳಿಗೆಯನ್ನು ವಿತರಿಸಿದ್ದು ವಿಶೇಷ.

ಈ ವೇಳೆ ಮಾತನಾಡಿದ ಬಿಜೆಪಿ ನಗರಾಧ್ಯಕ್ಷ ಎಲ್ ನಾಗೇಂದ್ರ,ಕೆಂಪೇಗೌಡರು ಒಕ್ಕಲಿಗ ಸಮುದಾಯದ ಪ್ರಭುಗಳಾಗಿದ್ದರೂ ಸಹ ಒಂದೇ ಸಮುದಾಯಕ್ಕೆ ಸೀಮೀತವಾದವರಲ್ಲ ಎಂಬುದಕ್ಕೆ ಅವರು ಕಟ್ಟಿದ ಬೆಂಗಳೂರು ನಗರ ಸಾಕ್ಷಿ ಎಂದು ಹೇಳಿದರು.

ಪ್ರತಿ ಸಮುದಾಯದವರಿಗೂ ಒಂದೊಂದು ಕೇರಿಯನ್ನು ಸಮುದಾಯದ ಹೆಸರಿನಲ್ಲೇ ಕಟ್ಟಿಕೊಟಿದ್ದಾರೆ,ಕೆಂಪೇಗೌಡರು ನಡೆಸಿದ ರಾಜಾಡಳಿತವೂ ಇತರ ರಾಜರಿಗೆ ಮಾದರಿಯಾಗಿದ್ದನ್ನು ಇತಿಹಾಸದ ಪುಟದಲ್ಲಿ ಕಾಣಬಹುದು. ಇಂತಹ ಮಹಾನ್ ನಾಯಕರು ನೆಲೆಸಿದ ನಾಡಿನಲ್ಲಿ ಬದುಕುತ್ತಿರುವ ನಾವು ಪುಣ್ಯವಂತರು ಎಂದು ಹೇಳಿದರು.

ಶಾಸಕ ಜಿ ಟಿ ದೇವೇಗೌಡ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮರಿಗೌಡ,ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿಜಯಕುಮಾರ್, ಮೂಡ ಮಾಜಿ ಅಧ್ಯಕ್ಷ ಯಶಸ್ವಿ ಸೋಮಶೇಖರ್, ಹೇಮಂತ್ ಕುಮಾರ್ ಗೌಡ, ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್,
ಕೆಪಿಸಿಸಿ ಸದಸ್ಯರಾದ ನಜರ್ಬಾದ್ ನಟರಾಜ್,ಇಂದಿರಾ ಗಾಂಧಿ ಬ್ಲಾಕ್ ಅಧ್ಯಕ್ಷ ಮಂಚೇಗೌಡನ ಕೊಪ್ಪಲು ರವಿ, ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣಗೌಡ, ಒಕ್ಕಲಿಗರ ಸಂಘದ ಕಾರ್ಯದರ್ಶಿ ಚೇತನ್ ಗೌಡ, ಆನಂದ್, ಸೂರಜ್, ಸದಾಶಿವ್, ಗಿರೀಶ್ ಗೌಡ ಮತ್ತಿತರರು ಹಾಜರಿದ್ದರು.


Share this with Friends

Related Post