Mon. Dec 23rd, 2024

ಸಿಎಂ ಸ್ಥಾನ ಡಿಕೆಶಿಗೆ ಬಿಟ್ಟುಕೊಡಿ: ಸಿದ್ದು ಸಮ್ಮುಖದಲ್ಲೇ ಸ್ವಾಮೀಜಿ ಬ್ಯಾಟಿಂಗ್

Share this with Friends

ಬೆಂಗಳೂರು,ಜೂ.27: ಕೆಂಪೇಗೌಡ ಜಯಂತಿ ವೇಳೆ ವೇದಿಕೆಯಲ್ಲೇ ಡಿಕೆಶಿ ಸಿಎಂ ಆಗಬೇಕೆಂದು ವಿಶ್ವ ಒಕ್ಕಲಿಗ ಮಹಾ ಸಂಸ್ಥಾನ ಮಠದ ಚಂದ್ರಶೇಖರನಾಥ ಸ್ವಾಮೀಜಿ ಹೇಳಿದ್ದು ಚರ್ಚೆಗೆ‌ ಗ್ರಾಸ‌ ಒದಗಿಸಿದೆ.

ಎಲ್ಲರೂ ಮುಖ್ಯಮಂತ್ರಿಗಳಾಗಿ ಕೆಲಸ ಮಾಡಿದ್ದಾರೆ. ಡಿ.ಕೆ ಶಿವಕುಮಾರ್ ಅವರು ಮುಖ್ಯಮಂತ್ರಿ ಆಗಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿಯೇ ಚಂದ್ರಶೇಖರನಾಥ ಸ್ವಾಮೀಜಿ ಹೇಳಿದ್ದಾರೆ.

ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ನಾಡಪ್ರಭು ಕೆಂಪೇಗೌಡರ 515 ನೇ ಜಯಂತೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದಾಗ ಸ್ವಾಮೀಜಿ, ಸಿದ್ದರಾಮಯ್ಯನವರು ಮುಂದೆ ಡಿ.ಕೆ ಶಿವಕುಮಾರ್ ಅವರಿಗೆ ಸಿಎಂ ಸ್ಥಾನ ಬಿಟ್ಟುಕೊಡಬೇಕು ಎಂದು ಹೇಳಿದರು.

ಸ್ವಾಮೀಜಿ ಹೀಗೆ ಹೇಳುವಾಗ ಸಿದ್ದರಾಮಯ್ಯ,ಡಿ.ಕೆ.ಶಿವಕುಮಾರ್ ಅಕ್ಕಪಕ್ಕದಲ್ಲೆ ಮೌನವಾಗಿ ಕುಳಿತಿದ್ದರು.

ಸಿದ್ದರಾಮಯ್ಯನವರು ಮನಸ್ಸು ಮಾಡಿದರೆ ಮಾತ್ರ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗಲು ಸಾಧ್ಯ, ಈಗಾಗಲೇ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗಿ ಅನುಭವ ಹೊಂದಿದ್ದಾರೆ. ಆದ್ದರಿಂದ ದಯವಿಟ್ಟು ಡಿ.ಕೆ ಶಿವಕುಮಾರ್ ಅವರಿಗೆ ಅವಕಾಶ ಮಾಡಿಕೊಡಲಿ ಎಂದು ಹೇಳಿದರು.

ಬೆಂಗಳೂರನ್ನ ವಿಭಾಗ ಮಾಡುವುದು ಬೇಡ. ಉತ್ತರ ಕರ್ನಾಟಕ ಬೇರೆ ದಕ್ಷಿಣ ಕರ್ನಾಟಕ ಬೇರೆ ಅಂತ ಡಿವೈಡ್ ಮಾಡಿದರೆ ಅಭಿವೃದ್ಧಿ ಆಗಲ್ಲ ಹಾಗೆಯೆ ಬೆಂಗಳೂರು ವಿಭಾಗ ಮಾಡುವುದು ಬೇಡ ಎಂದು ಇದೇ ವೇಳೆ ಸ್ವಾಮೀಜಿ ಮನವಿ ಮಾಡಿದರು.


Share this with Friends

Related Post