Mon. Dec 23rd, 2024

ಚನ್ನಪಟ್ಟಣದಲ್ಲಿ ಡಿಕೆ ಬ್ರದರ್ಸ್ ಯಾರೇ ನಿಂತರೂ ಸೋಲು: ಅಶೋಕ್

Share this with Friends

ಬೆಂಗಳೂರು,ಜೂ.27: ಚನ್ನಪಟ್ಟಣದ ಉಪಚುನಾವಣೆಯಲ್ಲಿ ಡಿ.ಕೆ ಬ್ರದರ್ಸ್ ಪೈಕಿ ಯಾರೇ ನಿಂತರೂ ಸೋಲಿಸುತ್ತೇವೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಹೇಳಿದ್ದಾರೆ.

ಬೆಂಗಳೂರಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಚನ್ನಪಟ್ಟಣದಲ್ಲಿ ಮೈತ್ರಿ ಅಭ್ಯರ್ಥಿ ಯಾರು ಅನ್ನೋದಕ್ಕಿಂತ ಒಂದೇ ಅಭ್ಯರ್ಥಿ. ಅದು ಬಿಜೆಪಿ ಆಗಬಹುದು ಅಥವಾ ಜೆಡಿಎಸ್ ಆಗಬಹುದು ಎಂದು ಹೇಳಿದರು.

ಕುಮಾರಸ್ವಾಮಿಯವರ ಜೊತೆ ಈಗಾಗಲೇ ದೆಹಲಿಗೆ ಹೋದಾಗ ಮಾತುಕತೆ ಮಾಡಿದ್ದೇವೆ ಅವರು ನಾವು ಗೆಲ್ಲಬೇಕು ಅಷ್ಟೇ ಎಂದಿದ್ದಾರೆ, ಹಾಗಾಗಿ ಡಿಕೆ ಬ್ರದರ್ಸ್ ಆಟ ಅಲ್ಲಿ ನಡೆಯೋದಿಲ್ಲಾ ಎಂದರು.

ಈ ಸರ್ಕಾರ ಚನ್ನಪಟ್ಟಣದಲ್ಲಿ ಹಣದ ಹೊಳೆ ಹರಿಸುತ್ತದೆ,ಅದನ್ನು ತಡೆದು ಗೆಲ್ಲುವ, ಯಾರೇ ಅಭ್ಯರ್ಥಿ ಆದರೂ ಅವರನ್ನು ಆಯ್ಕೆ ಮಾಡೋಣ ಎಂದಿದ್ದಾರೆ. ನಾವು ಮತ್ತು ಕುಮಾರಸ್ವಾಮಿ ಅಭ್ಯರ್ಥಿಯ ವಿಚಾರದಲ್ಲಿ ಮುಕ್ತವಾಗಿ ಇದ್ದೇವೆ ಎಂದು ಅಶೋಕ್ ತಿಳಿಸಿದರು.

ಕಾಂಗ್ರೆಸ್‍ಗೆ ಬಿಪಿ, ಶುಗರ್ ಜಾಸ್ತಿ ಆಗಿದೆ, ಸ್ವಲ್ಪ ಶಾಕ್ ಟ್ರೀಟ್‍ಮೆಂಟ್ ಕೊಡಬೇಕು,ಆಗ ಬಿಪಿ, ಶುಗರ್ ಕಡಿಮೆ ಆಗುತ್ತೆ, ಆನಂತರಾನೆ ಅವರು ಜನರ ಕಡೆ ನೋಡೋದು ಎಂದು ಚಾಟಿ‌ ಬೀಸಿದರು.

ಬೆಲೆ ಏರಿಕೆ ಮಾಡಿರೋದ್ರಿಂದ ಈ ಮೂರು ಬೈ ಎಲೆಕ್ಷನ್‍ನಲ್ಲಿ ಜನ ಕಾಂಗ್ರೆಸ್‍ಗೆ ಮೂರು ನಾಮ ಹಾಕಿದ್ರೆ ಬೆಲೆಗಳೆಲ್ಲ ಇಳಿದು ಹೋಗುತ್ತೆ. ರಾಜ್ಯದ ಜನರಿಗೆ ಮನವಿ ಮಾಡುತ್ತೇನೆ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಸೋಲಿಸಿ ಬೆಲೆ ಇಳಿಕೆ ಆಗುತ್ತದೆ ಎಂದು ಅಶೋಕ್ ಮನವಿ ಮಾಡಿದರು.


Share this with Friends

Related Post