Mon. Dec 23rd, 2024

ನಿರಂತರ ಧರಣಿ ಕೈ ಬಿಟ್ಟಕಾವೇರಿ ಕ್ರಿಯಾ ಸಮಿತಿ

Share this with Friends

ಮೈಸೂರು, ಫೆ.14: ತಮಿಳು ನಾಡಿಗೆ ನೀರು ‌ಹರಿಸುವುದನ್ನು ಖಂಡಿಸಿ ನಿರಂತರ ಧರಣಿ ನಡೆಸುತ್ತಾ ಬಂದಿದ್ದ‌ ಕಾವೇರಿ ಕ್ರಿಯಾ ಸಮಿತಿ ನೂರು ದಿನ ಪೂರೈಸಿದೆ.

ಸಧ್ಯಕ್ಕೆ ಧರಣಿಯನ್ನು ತಾತ್ಕಾಲಿಕವಾಗಿ ಕೈ ಬಿಡಲು ನಿರ್ಧರಿಸಿದ್ದು ಇದುವರೆಗೆ ನಡೆಸಿದ‌ ವೇದಿಕೆಯಲ್ಲೇ ವಾರಕ್ಕೊಮ್ಮೆ ‌ಧರಣಿ ಮಾಡಲು ತೀರ್ಮಾನಿಸಲಾಗಿದೆ.

100ನೇ ದಿನ ಧರಣಿ ಸತ್ಯಗ್ರಹದಲ್ಲಿ ಭಗೀರಥ ಚಲನಚಿತ್ರದ ನಾಯಕ ನಟಿ ಚಂದನ ರಾಘವೇಂದ್ರ ಮಾತನಾಡಿ ಕಾವೇರಿ ಕ್ರಿಯಾ ಸಮಿತಿಯ ಅಧ್ಯಕ್ಷರಾದ ಎಸ್ ಜಯಪ್ರಕಾಶ್ ರವರು ಬಿಜೆಪಿ ಮುಖಂಡರಾಗಿರುವುದರಿಂದ ಕಾವೇರಿ ನೀರಿನ ಹೋರಾಟದ ವಿಚಾರವನ್ನು ಕೇಂದ್ರ ಸಚಿವರುಗಳ ಸಹಾಯದಿಂದ ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಬೇಕೆಂದು ಸಲಹೆ ನೀಡಿದರು.

ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಕೂಡಲೇ ಸರ್ವಪಕ್ಷ ಸಭೆ ಕರೆದು ಸುಗೀವಾಜ್ಞೆ ಹೊರಡಿಸುವ ಮೂಲಕ ಕಾವೇರಿ ನೀರನ್ನು ಬಿಡಲಾಗದ ಪರಿಸ್ಥಿತಿಯನ್ನು ಸ್ಪಷ್ಟಪಡಿಸಬೇಕೆಂದು ಇಂದಿನ ಧರಣಿಯಲ್ಲಿ ಒತ್ತಾಯಿಸಲಾಯಿತು.

ಈ ಕೂಡಲೇ ಕಾವೇರಿ ನೀರಿನ ಸಮಸ್ಯೆ ಬಗೆಹರಿಸಲು ಆಗಿರುವ ಅನ್ಯಾಯವನ್ನು ಕಾವೇರಿ ನ್ಯಾಯಮಂಡಳಿಯನ್ನು ರದ್ದುಪಡಿಸಿ ಹೊಸ ನ್ಯಾಯಾಂಗವನ್ನು ರಚಿಸುವ ಮೂಲಕ ಕರ್ನಾಟಕ ರಾಜ್ಯಕ್ಕೆ ನ್ಯಾಯ ದೊರಕಿಸಿ ಕೊಡಬೇಕೆಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಯಿತು.

ಮಂಡ್ಯದ ರೈತ ಹಿತರಕ್ಷಣಾ ಸಮಿತಿಯ ಸುನಂದ ಜಯರಾಂ,ಪ್ರೊ|| ನಂಜರಾಜೇಅರಸ್, ಸಾಹಿತಿ ಬನ್ನೂರು ರಾಜು, ಮಡಿಕೇರಿ ಗೋಪಾಲ್, ನಗರಪಾಲಿಕೆ ಸದಸ್ಯರಾದ ಮಾ ವಿ ರಾಮಪ್ರಸಾದ್, ರಾಜುಗೌಡ್ರು ಮುಂತಾದವರು ಮಾತನಾಡಿದರು.

ಹೆಚ್.ಕೆ ರಾಮು, ಸಾಹಿತಿ ಸಾರಸುದರ್ಶನ್, ಡಾ. ರಾಜ್ ಸಂಘದ ಅಭಿಮಾನಿ ಬಳಗದ ಅಧ್ಯಕ್ಷರಾದ ಎಂ ರಾಮೇಗೌಡ, ಕಾವೇರಿ ಕ್ರಿಯಾ ಸಮಿತಿಯ ಅಧ್ಯಕ್ಷರಾದ ಎಸ್ ಜಯಪ್ರಕಾಶ್, ಮೆಲ್ಲಹಳ್ಳಿ ಮಹದೇವಸ್ವಾಮಿ, ತೇಜಸ್ ಲೋಕೇಶ್ ಗೌಡ, ನಂಜುಂಡಸ್ವಾಮಿ ಸೇರಿದಂತೆ‌ ಬಹಳಷ್ಟು ಮುಖಂಡರು ಭಾಗವಹಿಸಿದ್ದರು.


Share this with Friends

Related Post