Mon. Dec 23rd, 2024

ಡಾ.ಬಿ ಆರ್ ಮಮತ ಅವರಿಗೆ ಅಭಿನಂದನೆ

Share this with Friends

ಬೆಂಗಳೂರು, ಜೂ.27: ವಾರ್ತಾ ಮತ್ತು ಪ್ರಚಾರ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಐಎಎಸ್ ಅಧಿಕಾರಿ ಡಾ.ಬಿ ಆರ್ ಮಮತ ಅವರು ನಿವೃತ್ತಿ ಹೊಂದುತ್ತಿದ್ದು ಅವರಿಗೆ ಅಭಿನಂದನಾ ಸಮಾರಂಭವನ್ನು ಹಮ್ಮಿಕೊಳ್ಳಲಾಯಿತು.

ಬೆಂಗಳೂರಿನ ಕುಮಾರ ಕೃಪಾ ರಸ್ತೆಯಲ್ಲಿರುವ ಗಾಂಧಿ ಭವನದಲ್ಲಿ ಸಂಜೆ ಡಾ. ಬಿ ಆರ್ ಮಮತಾ ಅವರಿಗೆ ಆತ್ಮೀಯವಾಗಿ ಅಭಿನಂದಿಸಲಾಯಿತು.

ಅಧ್ಯಕ್ಷತೆಯನ್ನು ಕರ್ನಾಟಕ ಗಾಂಧೀ ಸ್ಮಾರಕ ನಿಧಿಯ ಅಧ್ಯಕ್ಷ ಡಾ.ವೂಡೇ‌ ಪಿ ಕೃಷ್ಣ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಸರ್ಕಾರದ ನಿವೃತ್ತ‌ ಮುಖ್ಯ ಕಾರ್ಯದರ್ಶಿ ಸುಧಾಕರ ರಾವ್, ಸರ್ಕಾರದ ನಿವೃತ್ತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಂ ಆರ್ ಶ್ರೀನಿವಾಸಮೂರ್ತಿ, ಕರ್ನಾಟಕ ಸರ್ಕಾರದ ನಿವೃತ್ತ ಪ್ರಧಾನ ಕಾರ್ಯದರ್ಶಿ ಎಂ.ಕೆ ಶಂಕರಲಿಂಗೇಗೌಡ ಹಾಗೂ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜಿನೀಶ್, ದಿ ಹಿಂದೂ ಪತ್ರಿಕೆಯ ನಿವೃತ್ತ ಡೆಪ್ಯುಟಿ ಎಡಿಟರ್ ಪಿ. ರಾಮಯ್ಯ, ಹಿರಿಯ ಪತ್ರಕರ್ತೆ ನಾಹೀದ್ ಅತಾವುಲ್ಲಾ, ಹಾಗೂ ಅನೇಕ ಪತ್ರಕರ್ತರು ಮತ್ತಿತರರು
ಬಿ.ಆರ್.ಮಮತಾ ಅವರಿಗೆ‌ ಶಾಲು ಹೊದಿಸಿ ಆತ್ಮೀಯವಾಗಿ‌ ಸನ್ಮಾನಿಸಿ‌ ಅಭಿನಂದಿಸಿದರು.


Share this with Friends

Related Post