ಮೈಸೂರು, ಫೆ.14: ಇಂದಿನ ಯುವ ಜನತೆ ಪ್ರೀತಿ,ಪ್ರೇಮದ ಬಲೆಯಲ್ಲಿ ಬಿದ್ದು,ಜೀವನ ಹಾಳು ಮಾಡಿಕೊಳ್ಳುತ್ತಿರುವುದು ಎಲ್ಲರಿಗೂ ತಿಳಿದ ವಿಷಯ.
ಆದರೆ ಸಾಂಸ್ಕೃತಿಕ ನಗರಿಯಲ್ಲಿ ಪ್ರೇಮಿಗಳ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಿ ಇತರರಿಗೆ ಮಾದರಿಯಾಗಿದ್ದಾರೆ.
ಮೈಸೂರಿನ ವಿಶ್ವೇಶ್ವರ ನಗರದಲ್ಲಿರುವ ಮಹರ್ಷಿ ಪಬ್ಲಿಕ್ ಶಾಲೆಯ ಮಕ್ಕಳು ತಮ್ಮ ತಮ್ಮ ಪೋಷಕರಿಗೆ ಪಾದಪೂಜೆ ಮಾಡುವ ಮೂಲಕ ಮಾದರಿಯಾಗಿದ್ದಾರೆ.
ಪ್ರೇಮಿಗಳ ದಿನಾಚರಣೆ ಬದಲು ನಮ್ಮ ಹಿಂದುತ್ವದ ಸಂಸ್ಕಾರ, ಸಂಸ್ಕೃತಿ, ಹಿರಿಯರನ್ನು ಪ್ರೀತಿಸೋಣ ಎಂಬ ಘೋಷ ವಾಕ್ಯದೊಂದಿಗೆ ಪೋಷಕರ ಪಾದ ತೊಳೆದು ಕುಂಕುಮ, ಅರಿಶಿಣ ಹಚ್ಚಿ ಮಂಗಳಾರತಿ ಮಾಡಿ ಮಕ್ಕಳು ಆಶೀರ್ವಾದ ಪಡೆದರು.
ಈ ಸಂದರ್ಭದಲ್ಲಿ ಶಾಲೆಯ ವ್ಯವಸ್ಥಾಪಕ ಅಧ್ಯಕ್ಷರಾದ ಭವಾನಿ ಶಂಕರ್ ಮಾತನಾಡಿ,ಚಿಕ್ಕವರಿದ್ದಾಗಲೇ ಮಕ್ಕಳಲ್ಲಿ ನಮ್ಮ ಸಂಸ್ಕೃತಿಯನ್ನು ಕಲಿಸುವುದು ಉತ್ತಮ ಎಂದು ತಿಳಿಸಿದರು.
ಶಾಲೆಯ ಮುಖ್ಯಸ್ಥರಾದ ತೇಜಸ್ ಶಂಕರ್, ರಾಘವೇಂದ್ರ, ಅನಿತಾ, ಶೈಲಜಾ, ಪ್ರಿಯಾಂಕ , ಅಂಕಿತ ಮತ್ತಿತರರು ಹಾಜರಿದ್ದರು.