Mon. Dec 23rd, 2024

ಹಾಡಹಗಲೇ 1.80 ಕೋಟಿ ಹಣ, ಚಿನ್ನಾಭರಣ ದೋಚಿದ ಕಳ್ಳರು

Share this with Friends

ಮೈಸೂರು,ಜು.2: ಕಳ್ಳರು ಹಾಡುಹಗಲೇ ಮನೆ ಬೀಗ ಮುರಿದು ಒಳನುಗ್ಗಿ 1.80 ಕೋಟಿ ಹಣ ಹಾಗೂ ಚಿನ್ನಾಭರಣ ದೋಚಿರುವ‌ ಘಟನೆ ಮೈಸೂರು ಜಿಲ್ಲೆ ಹುಣಸೂರು ತಾಲೂಕಿನಲ್ಲಿ ನಡೆದಿದೆ.

ಹುಣಸೂರು ತಾಲೂಕಿನ ಮಂಜುನಾಥ ಬಡಾವಣೆ ನಿವಾಸಿ,ಫರ್ಟಿಲೈಸರ್ ಅಂಗಡಿ ಮಾಲೀಕ ಗಿರೀಶ್ ಎಂಬುವರ ಮನೆಯಲ್ಲಿ ಈ ಘಟನೆ ನಡೆದಿದೆ.

ಗಿರೀಶ್ ಅವರು ಸಂಬಂಧಿಕರ ಬಳಿ ಜಮೀನು ಖರೀದಿಸಲು ಸಾಲ ಮಾಡಿ ಹಣ ತಂದು ಮನೆಯಲ್ಲಿಟ್ಟಿದ್ದರು.ಗರೀಶ್ ಅಂಗಡಿಗೆ ಹೋಗಿದ್ದರು,ಇತ್ತ ಪತ್ನಿ ಹಾಗೂ ಮಗಳು ಸ್ವಂತ ಊರು ಕೊಯಮತ್ತೂರು ಕಾಲೋನಿಗೆ ಹೋಗಿದ್ದರು,ಆಗ ಕಳ್ಳರು ಮನೆ ಹಿಂಬಾಗಿಲು ಮುರಿದು ಒಳನುಗ್ಗಿ ಹಣ,ಆಭರಣ ದೋಚಿದ್ದಾರೆ.

ಸ್ಥಳಕ್ಕೆ ಬೆರಳಚ್ಚು ತಜ್ಞರು, ಶ್ವಾನದಳ ಭೇಟಿ ನೀಡಿ ಪರಿಶೀಲನೆ ನಡೆಸಿದರು,ಹುಣಸೂರು ಟೌನ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.


Share this with Friends

Related Post