Mon. Dec 23rd, 2024

ಬಿಜೆಪಿ ಅಧಿಕಾರದಲ್ಲಿದ್ದಾಗ ಕಾನೂನು ಪ್ರಕಾರವೇ ಸೈಟ್ ಹಂಚಿಕೆ: ಸಿಎಂ ಸ್ಪಷ್ಟನೆ

Share this with Friends

ಬೆಂಗಳೂರು,ಜು.2: ಮೈಸೂರಿನ ಮುಡಾ ಸೈಟ್ ಹಂಚಿಕೆ ಬಗ್ಗೆ ಸ್ಪಷ್ಟನೆ ನೀಡಿರುವ ಸಿಎಂ ಸಿದ್ದರಾಮಯ್ಯ, ಬಿಜೆಪಿ ಅವಧಿಯಲ್ಲಿ ಕೊಟ್ಟಿರುವ ನಿವೇಶನ ಇದಾಗಿದೆ ಎಂದು ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ,ಇಲ್ಲಿ ಯಾವುದೇ ಕಾನೂನು ಉಲ್ಲಂಘನೆ ಆಗಿಲ್ಲ, ಸ್ವಾಧೀನ ಮಾಡಿಕೊಂಡ ಜಾಗಕ್ಕೆ ಬದಲಿ ನಿವೇಶನ ಕೊಟ್ಟಿದ್ದಾರೆ, ಕಾನೂನು ಪ್ರಕಾರವೇ ಸೈಟ್ ಹಂಚಿಕೆ ಆಗಿದೆ ಎಂದು ಸ್ಪಷ್ಟಪಡಿಸಿದರು.

ನನ್ನ ಪತ್ನಿಯ ಜಾಗ ಅಂತ ಆಗ ನಾವು ಕೇಳಿದ್ದೆವು, ನನ್ನ ಬಾಮೈದನ ಜಾಗವನ್ನ ನನ್ನ ಹೆಂಡತಿಗೆ ಗಿಫ್ಟ್ ಡೀಡ್ ಮಾಡಿದ್ದರು, ಮುಡಾದವರು ಈ ಜಾಗವನ್ನ ಯಾವುದೇ ಮಾಹಿತಿ ಇಲ್ಲದೆ ಅಕ್ವೈರ್ ಮಾಡಿಕೊಂಡು ಸೈಟ್ ಮಾಡಿದ್ದರು,ಆಗ ನಮ್ಮ ಜಮೀನಿಗೆ ಪರಿಹಾರ ಕೊಡಿ ಅಂತ ನಾವು ಕೇಳಿದಾಗ ಬದಲಿ ನಿವೇಶನ ಕೊಡುವುದಾಗಿ ಹೇಳಿದ್ದರು.

ಅದರಂತೆ 50:50 ಅನುಪಾತದಲ್ಲಿ ನಿವೇಶನ ಹಂಚಿಕೆ ಆಗಿದೆ. ಇದು ತಪ್ಪಾ. ಇದರಲ್ಲಿ ಯಾವುದೇ ಕಾನೂನು ಉಲ್ಲಂಘನೆ ಆಗಿಲ್ಲ. ಕಾನೂನು ಪ್ರಕಾರವೇ ಇದು ಹಂಚಿಕೆ ಆಗಿದೆ ಎಂದು ಸಿಎಂ ಸಿದ್ದರಾಮಯ್ಯ ಮಾಧ್ಯಮದವರಿಗೆ ತಿಳಿಸಿದರು.


Share this with Friends

Related Post