Sun. Apr 20th, 2025

ಕುಡಿದ ಮತ್ತಿನಲ್ಲಿ ಡಿವೈಡರ್ ಗೆ ಬೈಕ್ ಡಿಕ್ಕಿ:ಇಬ್ಬರು ಸಾವಾರರ ದುರ್ಮರಣ

Share this with Friends

ಹಾವೇರಿ,ಜು.2: ಕುಡಿದ ಮತ್ತಿನಲ್ಲಿ ಬೈಕ್ ಓಡಿಸಿ ಡಿವೈಡರ್ ಗೆ ಡಿಕ್ಕಿಯಾದ ಪರಿಣಾಮ ಇಬ್ಬರು ಸವಾರರು ಮೃತಪಟ್ಟ ಘಟನೆ ಹಾವೇರಿ ಜಿಲ್ಲೆ ರಾಣೇಬೆನ್ನೂರು ಬಳಿ ನಡೆದಿದೆ.

ಹರಳಯ್ಯ ನಗರದ ನಿವಾಸಿಗಳಾದ ನಂದನ್ ಶಿವಪ್ಪನವರ(22) ಹಾಗೂ ವೈಭವ ಪಟ್ಟಣ್ಣಶೆಟ್ಟಿ (22) ಮೃತ ಯುವಕರು.

ಸುಳ್ಳು ನೆಪ ಹೇಳಿ ಮನೆಯಿಂದ ಹೊರ ಹೋಗಿದ್ದ ಇಬ್ಬರು ಸ್ನೇಹಿತರು ಇಡೀ ರಾತ್ರಿ ಕಂಠ ಪೂರ್ತಿ ಕುಡಿದು, ಮನೆಗೆ ಹೊರಟಿದ್ದಾರೆ.

ಈ ವೇಳೆ ರಾಣೇಬೆನ್ನೂರು ನಗರದ ನೇಕಾರ ಕಾಲೋನಿ ಬಳಿ ಬರುವಾಗ ಬೈಕ್ ನಿಯಂತ್ರಣ ಕಳೆದುಕೊಂಡು ಡಿವೈಡರ್ ಗೆ
ಡಿಕ್ಕಿ ಹೊಡೆದಿದೆ.

ತೀವ್ರ ರಕ್ತಸ್ರಾವದಿಂದ ಇಬ್ಬರು ಯುವಕರು ಮೃತಪಟ್ಟಿದ್ದಾರೆ,ರಾಣೇಬೆನ್ನೂರು ಗ್ರಾಮೀಣ ಠಾಣೆ ಪೋಲಿಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.


Share this with Friends

Related Post