ಬೆಂಗಳೂರು ಜುಲೈ.3: ಸ್ಪ್ರಿಂಗ್, ಕಾಯಿರ್ ಮತ್ತು ಫೋಮ್ ಉಳ್ಳ ಗುಣಮಟ್ಟದ ಹಾಸಿಗೆಗಳ ಶ್ರೇಣಿಗೆ ಪ್ರಸಿದ್ದವಾದ ರೆಸ್ಟೊಲೆಕ್ಸ್ ಕಂಪನಿ ಬೆಂಗಳೂರಿನ ಬಾಣಸವಾಡಿಯಲ್ಲಿ ಏಳನೇ ಎಕ್ಸ್ ಪೀರಿಯನ್ಸ್ ಸೆಂಟರ್ ಪ್ರಾರಂಭಿಸಿದೆ.
ಪ್ರತೀ ಗ್ರಾಹಕರು ಉತ್ಪನ್ನಗಳನ್ನು ನೋಡಿ ವಿವೇಚಯುಕ್ತ ನಿರ್ಧಾರ ತೆಗೆದುಕೊಳ್ಳಲು ನೆರವಾಗಲು ಈ ಎಕ್ಸ್ ಪೀರಿಯನ್ಸ್ ಸೆಂಟರ್ ಅನ್ನು ವೈಜ್ಞಾನಿಕವಾಗಿ ವಿನ್ಯಾಸಗೊಳಿಸಲಾಗಿದೆ.
ಈ ಎಕ್ಸ್ ಪೀರಿಯನ್ಸ್ ಸೆಂಟರ್ ನಲ್ಲಿ ರೆಸ್ಟೊಲೆಕ್ಸ್ ನ ಎಲ್ಲಾ ಉತ್ಪನ್ನಗಳು ಪ್ರದರ್ಶನಕ್ಕಿವೆ, ಜೊತೆಗೆ ಬೆಲೆ ಮತ್ತು ಸರ್ವೀಸ್ ಕುರಿತಾದ ಆಫರ್ ಗಳು ಕೂಡಾ ಸಿಗಲಿದೆ
1750 ಚದರ ಅಡಿ ವಿಸ್ತೀರ್ಣದ ಈ ಎಕ್ಸ್ ಪೀರಿಯನ್ಸ್ ಸೆಂಟರ್ ಅನ್ನು ರೆಸ್ಟೊಲೆಕ್ಸ್ ನ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಕುರುವಿಲ್ಲ, ನಿರ್ದೇಶಕ ದವೀದ್ ಕುರುವಿಲ್ಲ, ರೆಸ್ಟೊಲೆಕ್ಸ್ ನ ಸಿಇಒ ಸುರೇಶ್ ಬಾಬು ಮತ್ತು ರೆಸ್ಟೊಲೆಕ್ಸ್ ನ ಮಾರ್ಕೆಟಿಂಗ್ ಹೆಡ್ ಸೋನಾಕ್ಷಿ ದವೀದ್ ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ದವೀದ್ ಕುರುವಿಲ್ಲಾ, ಕಳೆದ 40 ವರ್ಷಗಳಿಂದ ರೆಸ್ಟೊಲೆಕ್ಸ್ ಗ್ರಾಹಕ ಸ್ನೇಹಿ ನಿರ್ಧಾರಗಳಿಗೆ ನೀಡುತ್ತಾ ಬಂದಿದೆ. ಈ ಹೊಸ ಎಕ್ಸ್ ಪೀರಿಯನ್ಸ್ ಸೆಂಟರ್ ಸೇರ್ಪಡೆಯು ನಮ್ಮ ಪಾಲುದಾರರ ಜೊತೆಗಿನ ಬದ್ಧತೆಯನ್ನು ಮತ್ತಷ್ಟು ಗಟ್ಟಿಗೊಳಿಸಲಿದೆ ಎಂದು ಹೇಳಿದರು.
ರೆಸ್ಟೊಲೆಕ್ಸ್ ನ ಸಿಇಒ ಸುರೇಶ್ ಬಾಬು, “ಉತ್ತಮ ಹಾಸಿಗೆಗಾಗಿ ಹೆಚ್ಚುತ್ತಿರುವ ಗ್ರಾಹಕರ ಬೇಡಿಕೆಯನ್ನು ಪೂರೈಸಲು ನಾವು ನಮ್ಮ ಉಪಸ್ಥಿತಿಯನ್ನು ಹೆಚ್ಚು ಸ್ಥಳಗಳಿಗೆ ವಿಸ್ತರಿಸುತ್ತಿದ್ದೇವೆ ಎಂದು ತಿಳಿಸಿದರು.
ರೆಸ್ಟೊಲೆಕ್ಸ್ ಗ್ರಾಹಕರ ಅಗತ್ಯಗಳಿಗೆ ತಕ್ಕಂತೆ 10 ವಿಭಾಗಗಳಲ್ಲಿ 28 ವೇರಿಯಂಟ್ ಗಳ ಹಾಸಿಗೆಗಳನ್ನು ಅಭಿವೃದ್ಧಿಪಡಿಸಿದೆ.