ಅನೇಕ ಆರೋಗ್ಯಕರ ಪ್ರಯೋಜನಗಳನ್ನು ಹೊಂದಿರುವ ದ್ರಾಕ್ಷಿ ನಿಜಕ್ಕೂ ಜಾದೂ ಮಾಡುವ ಹಣ್ಣು. ಇದು ಮಂಡಿ ನೋವು ಕಡಿಮೆ ಮಾಡಲು ಸಹಕಾರಿ. ಇದು ಮೊಡವೆ ಮತ್ತು ಒಣ ಚರ್ಮ ನಿವಾರಣಗೆ ನೆರವಾಗುತ್ತದೆ. ಅಲ್ಲದೇ, ಇದು ರೋಗ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸಲೂ ಕೂಡ ಸಹಾಯ ಮಾಡುತ್ತದೆ. ಪ್ರತಿ ನಿತ್ಯ ದ್ರಾಕ್ಷಿಗಳನ್ನು ಸೇವಿಸುವುದರಿಂದ ಅದು ದೃಷ್ಟಿಯನ್ನು ಸುಧಾರಿಸುತ್ತದೆ. ಎಂಬ ಮತ್ತೊಂದು ಮುಖ್ಯ ಆರೋಗ್ಯಕಾರಿ ಪ್ರಯೋಜನದ ಮೇಲೆ ಇತ್ತೀಚಿನ ಸಂಶೋಧನೆಯೊಂದು ಬೆಳಕು ಚೆಲ್ಲಿದೆ.
ಅಮೆರಿಕದ ಆಲ್ರ್ಯಾಂಡೋದಲ್ಲಿ ನಡೆದ ಅಸೋಸಿಯೇಷನ್ ಫಾರ್ ರಿಸರ್ಚ್ ಇನ್ ವಿಷನ್ ಅಂಡ್ ಆಫ್ತಾಮೊಲಾಜಿ ಕಾನ್ಫೆರೆನ್ಸ್ ಸಮಾವೇಶದಲ್ಲಿ ಈ ಸಂಶೋಧನೆಯ ವಿವರಗಳನ್ನು ಮಂಡಿಸಲಾಯಿತು. ಪ್ರತಿ ದಿನ ನಿಯತವಾಗಿ ದ್ರಾಕ್ಷಿ ಹಣ್ಣುಗಳನ್ನು ಸೇವಿಸುವುದರಿಂದ ನೇತ್ರ ಆರೋಗ್ಯ ಸುಧಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಈ ಸಂಶೋಧನಾ ವರದಿ ವಿವರಿಸಿದೆ. ದ್ರಾಕ್ಷಿ ಸೇವಿಸುವುದರಿಂದ ಕಣ್ಣಿನ ಮುಖ್ಯ ಭಾಗವಾದ ರೆಟಿನಾ ಅಥವಾ ನೇತ್ರಜಾಲ ಅವನತಿ ಹೊಂದುವುದು ತಡೆಗಟ್ಟುಲ್ಪಡುತ್ತದೆ.
‘ಇಲಿ ಮೇಲೆ ಈ ಪ್ರಯೋಗವನ್ನು ಯಶಸ್ವಿಯಾಗಿ ನಡೆಸಲಾಗಿದೆ. ದ್ರಾಕ್ಷಿ ಸಮೃದ್ಧ ಆಹಾರವು ರೆಟಿನಾ ಕಾರ್ಯನಿರ್ವಹಣೆಯನ್ನು ಸಮರ್ಪಕಗೊಳಿಸಿ ಅದು ಹಾನಿಗೀಡಾಗುವುದನ್ನು ಗಮನಾರ್ಹವಾಗಿ ರಕ್ಷಿಸಿದ್ದು, ಈ ಪ್ರಯೋಗ ನೇತ್ರ ಆರೋಗ್ಯ ರಕ್ಷಣೆಯಲ್ಲಿ ಒಂದು ಮಹತ್ವ ಮೈಲಿಗಲ್ಲಾಗಲಿದೆ ಎಂದು ಫ್ಲೋರಿಡಾದ ಯೂನಿವರ್ಸಿಟಿ ಆಫ್ ಮಿಯಾಮಿಯ ಪ್ರಮುಖ ಲೇಖದ ಅಬಿಗೈಲ್ ಹ್ಯಾಕಂ ಹೇಳಿದ್ದಾರೆ.
ರೆಟಿನಾವು ಕಣ್ಣಿನ ಮುಖ್ಯ ಭಾಗವಾಗಿದ್ದು, ಇದು ಬೆಳಕಿಗೆ ಸ್ಪಂದಿಸುವ ಫೋಟೊರೆಸೆಪ್ಟರ್ ಕೋಶಗಳನ್ನು ಒಳಗೊಂಡಿದೆ. ರೆಟಿನಾ ಅವನತಿ ಹೊಂದಿರುವ ಇಲಿಯ ಫೋಟೊರೆಸೆಪ್ಟರ್‍ಗಳನ್ನು ದ್ರಾಕ್ಷಿಯಲ್ಲಿರುವ ಪೋಷಕಾಂಶ ರಕ್ಷಿಸುತ್ತದೆಯೇ ಎಂಬ ಬಗ್ಗೆ ಅಧ್ಯಯನದಲ್ಲಿ ಪತ್ತೆ ಹಚ್ಚಲಾಯಿತು.
✦ ಇದನ್ನೂ ಓದಿ : ಆಸ್ತಮಾಗೆ ಆಯುರ್ವೇದ ಚಿಕಿತ್ಸೆ ಹೇಗೆ..?
ಈ ಪ್ರಯೋಗದಲ್ಲಿ ಮೂಷಿಕವನ್ನು ಬಳಸಿಕೊಳ್ಳಲಾಯಿತು. ಇಲಿಗೆ ದ್ರಾಕ್ಷಿ ಪೋಷಕಾಂಶವಿರುವ ಆಹಾರವನ್ನು ಇಲಿಗೆ ತಿನ್ನಿಸಲಾಯಿತು. ದ್ರಾಕ್ಷಿ ಸಮೃದ್ಧ ಆಹಾರ ಸೇವಿಸಿದ ಮೂಷಿಕದ ರೆಟಿನಾ ಕಾರ್ಯ ಸಮರ್ಪಕವಾಗಿದ್ದು, ಅದು ಅವನತಿ ಹೊಂದುವುದನ್ನು ಗಮನಾರ್ಹವಾಗಿ ರಕ್ಷಿಸಿದ್ದು ಪ್ರಯೋಗದಿಂದ ತಿಳಿದುಬಂದಿತು.
ದ್ರಾಕ್ಷಿಯು ಆಕ್ಸಿಡೇಟಿವ್ ಒತ್ತಡವನ್ನು ನೇರವಾಗಿ ಪ್ರತಿರೋಧಿಸಿ ಕೋಶ ಮಟ್ಟದಲ್ಲಿ ಪರಿವರ್ತನೆಗಳಿಗೆ ಕಾರಣವಾಗಿ ನೇತ್ರ ಆರೋಗ್ಯವನ್ನು ವೃದ್ದಿಸಿದೆ ಎಂಬು ಅಬ್ಯಗಲ್ ಹ್ಯಾಕಂ ಹೇಳಿದ್ದಾರೆ. ದ್ರಾಕ್ಷಿ ಸೇವನೆಯು ರೆಟಿನಾ ಕಾರ್ಯನಿರ್ವಹಣೆ ಹಾಗೂ ಅವರ ರಕ್ಷಣೆಗೆ ನೆರವಾಗುತ್ತದೆ ಎಂದು ಈ ಅಧ್ಯಯನದಿಂದ ತಿಳಿದು ಬಂದಿದೆ.
ಈ ಬಗ್ಗೆ ನಡೆಸಲಾದ ಇನ್ನಷ್ಟು ವಿಶ್ಲೇಷಣೆಯಿಂದ ದ್ರಾಕ್ಷಿ ಹಣ್ಣಿನ ಆಹಾರವು ರೆಟಿನಾದಲ್ಲಿ ಉರಿಯುಂಟು ಮಾಡುವ ಪ್ರೋಟಿನ್ ಮಟ್ಟಗಳನ್ನು ಕಡಿಮೆ ಮಾಡಿ ರಕ್ಷಣೆ ನೀಡುವ ಪ್ರೋಟಿನ್‍ಗಳ ಮೊತ್ತವನ್ನು ಹೆಚ್ಚಿಸುತ್ತದೆ ಎಂಬುದು ತಿಳಿದುಬಂದಿದೆ.
ಪ್ರೇಮಿಗಳ ದಿನಾಚರಣೆ ಬದಲು ಮಕ್ಕಳಿಂದ ಪೋಷಕರಿಗೆ ಪಾದ ಪೂಜೆ