Mon. Dec 23rd, 2024

ರಾಹುಲ್ ಭಗವದ್ಗೀತೆ ಅಧ್ಯಯನ ಮಾಡಲಿ: ರೇಣುಕಾ ರಾಜ್

Share this with Friends

ಮೈಸೂರು,ಜು.3: ಹಿಂದೂಗಳ ಬಗ್ಗೆ ಅವಹೇಳನ ಕಾರಿಯಾಗಿ ಮಾತನಾಡಿರುವ ಲೋಕಸಭಾ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಕ್ಷಮೆ ಯಾಚಿಸಬೇಕೆಂದು ಮೈಸೂರು ನಗರ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ರೇಣುಕಾ ರಾಜ್ ಆಗ್ರಹಿಸಿದ್ದಾರೆ.

ತಮ್ಮ ಓಟ್ ಬ್ಯಾಂಕ್ ತೃಪ್ತಿ ಪಡಿಸಲು ಹಿಂದೂಗಳನ್ನು ಅವಹೇಳನ ಮಾಡಿ ತಾನೊಬ್ಬ ವಿರೋಧ ಪಕ್ಷದ ನಾಯಕ ಎಂಬ ಜವಾಬ್ದಾರಿ ಮರೆತು ರಾಹುಲ್‌ ಅವರು ಲೋಕಸಭೆಯಲ್ಲಿ ಮೊದಲ ಭಾಷಣದಲ್ಲೇ ಹಿಂದೂಗಳು ಎಂದರೆ ಹಿಂಸಾಚಾರ, ಅಸತ್ಯ ಮತ್ತು ದ್ವೇಷದಲ್ಲಿ ಮುಳುಗಿರುವವರು ಎಂದು ಹೇಳಿರುವುದು ಖಂಡನೀಯ ಎಂದಿದ್ದಾರೆ.

ರಾಹುಲ್ ಗಾಂಧಿ ಬೈಬಲ್ ಹಾಗೂ ಕುರಾನ್‌ಗಳನ್ನು ಅಧ್ಯಯನ ಮಾಡುವುದರ ಜೊತೆಗೆ ಜಗತ್ತಿಗೆ ಮಾದರಿಯಾಗಿರುವ ಭಗವದ್ಗೀತೆಯನ್ನೂ ಅಧ್ಯಯನ ಮಾಡಲಿ, ಆಗ ಅವರಿಗೆ ಹಿಂದೂ ಧರ್ಮದ ಬಗ್ಗೆ ಅರಿವಾಗುತ್ತದೆ ಎಂದು ರೇಣುಕಾ ರಾಜ್ ಹೇಳಿದ್ದಾರೆ.


Share this with Friends

Related Post