Fri. Nov 1st, 2024

ಇಂಗ್ಲೆಂಡ್‌ ಪ್ರಧಾನಮಂತ್ರಿಯಾಗಿಕೀರ್ ಸ್ಟಾರ್ಮರ್

Share this with Friends

ಲಂಡನ್,ಜು.5: ಇಂಗ್ಲೆಂಡ್‌ ನ ಪ್ರಧಾನಮಂತ್ರಿಯಾಗಿ ಲೇಬರ್‌ ಪಾರ್ಟಿಯ ಕೀರ್ ಸ್ಟಾರ್ಮರ್ ಆಯ್ಕೆಯಾಗಿದ್ದು, ರಿಷಿ ಸುನಕ್‌ ಅವರ ಕನ್ಸರ್ವೇಟಿವ್ ಪಾರ್ಟಿ ಹೀನಾಯ ಸೋಲನುಭವಿಸಿದೆ.

ಪಾರ್ಲಿಮೆಂಟ್ ಚುನಾವಣೆಯಲ್ಲಿ ರಿಷಿ ಸುನಾಕ್‌ ನೇತೃತ್ವದ ಕನ್ಸರ್ವೇಟಿವ್ ಪಕ್ಷವನ್ನು ಹೀನಾಯವಾಗಿ ಸೋಲಿಸಿರುವ ಲೇಬರ್ ಪಾರ್ಟಿ ಅಧಿಕಾರದ ಗದ್ದುಗೆ ಹಿಡಿದಿದೆ. ಲೇಬರ್ ಪಾರ್ಟಿಯ ಅಬ್ಬರದ ಮುಂದೆ 14 ವರ್ಷದ ಬಳಿಕ ಕನ್ಸರ್ವೇಟಿವ್ ಪಾರ್ಟಿ ಸಂಪೂರ್ಣವಾಗಿ ಸೋತು ಸುಣ್ಣವಾಗಿದೆ.

ಇಂಗ್ಲೆಂಡ್ ಪಾರ್ಲಿಮೆಂಟ್‌ನ ಒಟ್ಟು 650 ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಅಧಿಕಾರಕ್ಕೇರುವ ಪಕ್ಷಕ್ಕೆ 326 ಸ್ಥಾನಗಳ ಅವಶ್ಯಕತೆ ಇತ್ತು. ಕೀರ್ ಸ್ಟಾರ್ಮರ್ ನೇತೃತ್ವದ ಲೇಬರ್ ಪಾರ್ಟಿ 326 ಸ್ಥಾನಗಳನ್ನ ಗೆದ್ದು ಕೀರ್ ಸ್ಟಾರ್ಮರ್ ಪ್ರಧಾನಿಯಾಗಿದ್ದಾರೆ.

ಇಂಗ್ಲೆಂಡ್‌ನ ಪ್ರಧಾನಿ ಕೀರ್ ಸ್ಟಾರ್ಮರ್‌ಗೆ 61 ವರ್ಷ,ಲಂಡನ್ ಹೊರವಲಯದ ಸರ್ರೆಯಲ್ಲಿರುವ ಕಾರ್ಮಿಕ ಕುಟುಂಬದಲ್ಲಿ ಜನಿಸಿದವರು, ಕೀರ್ ಸ್ಟಾರ್ಮರ್‌ ತಾಯಿ ನರ್ಸ್‌ ಆಗಿದ್ದರು, ಲೀಡ್ಸ್ ವಿವಿಯಲ್ಲಿ ವಿದ್ಯಾಭ್ಯಾಸ ಮಾಡಿದ ಕೀರ್ ಸ್ಟಾರ್ಮರ್‌ ಆಕ್ಸ್‌ಫರ್ಡ್‌ನಲ್ಲಿ ಕಾನೂನು ವ್ಯಾಸಂಗ ಮಾಡಿದ್ದಾರೆ.

ಎಡಪಂಥೀಯ ಸಿದ್ಧಾಂತಗಳ ಬಗ್ಗೆ ಒಲವು ಹೊಂದಿದ್ದ ಕೀರ್ ಸ್ಟಾರ್ಮರ್‌ ಅವರು ವೃತ್ತಿಯಲ್ಲಿ ವಕೀಲರಾಗಿದ್ದವರು. ಮಾನವ ಹಕ್ಕುಗಳ ಪರ ಬಹಳಷ್ಟು ಹೋರಾಟಗಳನ್ನು ನಡೆಸಿ ಗಮನ ಸೆಳೆದಿದ್ದಾರೆ. ಮಾನವ ಹಕ್ಕು, ಕಾರ್ಮಿಕರ ಪರ ಕೀರ್ ಸ್ಟಾರ್ಮರ್‌ ನಡೆಸಿದ ದೀರ್ಘಕಾಲಿನ ಹೋರಾಟಕ್ಕೆ ಇಂಗ್ಲೆಂಡ್‌ನಲ್ಲಿ ಕೊನೆಗೂ ಅದ್ಭುತ ಜಯ ಸಿಕ್ಕಿದೆ.

1930ರ ಇಂಗ್ಲೆಂಡ್‌ ಚುನಾವಣೆಯಲ್ಲಿ ಲೇಬರ್ ಪಾರ್ಟಿ ಹೀನಾಯ ಸೋಲು ಅನುಭವಿಸಿತ್ತು. ಇದಾದ ಬಳಿಕ ಸತತ ಮೂರು ಬಾರಿ ಕನ್ಸರ್ವೇಟಿವ್ ಪಕ್ಷವೇ ಗೆಲುವು ಸಾಧಿಸುತ್ತಾ ಬಂದಿತ್ತು, ಪ್ರಬಲ ಕನ್ಸರ್ವೇಟಿವ್ ಪಾರ್ಟಿಯನ್ನು ಸೋಲಿಸುವಲ್ಲಿ ಕೀರ್ ಸ್ಟಾರ್ಮರ್ ಪಾತ್ರ ದೊಡ್ಡದು.ಇನ್ನು ಮುಂದೆ ಇವರದೇ ಸಾಮ್ರಾಜ್ಯ ಮುಂದುವರಿಯಲಿದೆ.


Share this with Friends

Related Post