Mon. Dec 23rd, 2024

ಸರಕಾರಿ ಕಾಲೇಜು ವಿದ್ಯಾರ್ಥಿಗಳಿಗೆ ಸಿಇಟಿ, ನೀಟ್ ಭೋಧಿಸಿದ ಜಿಪಂ ಸಿಇಒ ರಾಹುಲ್ ಶಿಂಧೆ

Share this with Friends

ಬೆಳಗಾವಿ: ನಗರದ ಸರಕಾರಿ ವಡಗಾವಿಯ ಪದವಿ ಪೂರ್ವ ಕಾಲೇಜು ವಡಗಾವಿಗೆ ಭೇಟಿ ನೀಡಿ ದ್ವೀತಿಯ ಪಿ.ಯು.ಸಿ ವಿಜ್ಞಾನ ವಿಭಾಗದ ತರಗತಿಯಲ್ಲಿನ ವಿದ್ಯಾರ್ಥಿಗಳೊಂದಿಗೆ ಬೆರೆತು ವಿದ್ಯಾರ್ಥಿಗಳಿಗೆ ಸಿಇಟಿ ನೀಟ್ ಪರೀಕ್ಷೆ ಹಾಗೂ ಜೆಇಇ ಪರೀಕ್ಷೆಗಳ ಬಗ್ಗೆ ಮಾರ್ಗದರ್ಶನ ನೀಡಿದರು.

ನಂತರ ಉಪನಿರ್ದೇಶಕರ ಕಾರ್ಯಾಲಯ ಪದವಿ ಪೂರ್ವ ಶಿಕ್ಷಣ ಇಲಾಖೆಗೆ ಭೇಟಿ ನೀಡಿ ಸಿಇಟಿ ನೀಟ್‌ ಪರೀಕ್ಷೆ ಹಾಗೂ ಜೆಇಇ ಪರೀಕ್ಷೆಗಳನ್ನು ಕೈಗೊಂಡು ಅದರ ಮೌಲ್ಯಮಾಪನ ಹಾಗೂ ಸ್ಕಾನರ್‌ ವಿಷಯದ ಬಗ್ಗೆ ಚರ್ಚಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಲು ಉಪನಿರ್ದೇಶಕರಿಗೆ ನಿರ್ದೇಶನ ನೀಡಿದರು.

ಈ ಸಂದರ್ಭದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎನ್.ಎಮ್ ಕಾಂಬಳೆ, ಶಾಖಾಧಿಕಾರಿ ಬಿ,ಎಮ್ ವಸ್ತ್ರದ್, ಪ್ರಥಮ ದರ್ಜೆ ಸಹಾಯಕ ಸಚಿನ ಶಿರಗಾಂವಿ, ದ್ವಿತೀಯ ದರ್ಜೆ ಸಹಾಯಕ ಸಂತೋಷ ಮಜಗಿ, ದ್ವಿತೀಯ ದರ್ಜೆ ಸಹಾಯಕ ಪಲ್ಲವಿ ಕಾಂಬಳೆ, ರಾಜ್ಯ ಸಂಪನ್ಮೂಲ ವ್ಯಕ್ತಿ ನಾಗರಾಜ ಮಾರೇಣ್ಣವರ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.


Share this with Friends

Related Post