ಮೈಸೂರು, ಜು.6: ಸಮಾಜಕ್ಕೆ ಮಾರಕವಾದ ಪ್ಲಾಸ್ಟಿಕ್ ಸಂಪೂರ್ಣ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಜನತೆ ಕೈ ಜೋಡಿಸಬೇಕು ಎಂದು ಶಾಸಕ ಟಿ.ಎಸ್.ಶ್ರೀವತ್ಸ ಮನವಿ ಮಾಡಿದರು.
ಕೃಷ್ಣರಾಜ ಕ್ಷೇತ್ರ ವ್ಯಾಪ್ತಿಯಲ್ಲಿ ಸುಮಾರು ಒಂದು ಲಕ್ಷ ಕ್ಕೂ ಹೆಚ್ಚು ಮನೆಗಳಿದ್ದು ಪ್ರತಿ ಮನೆಗಳಿಗೆ ಉಚಿತವಾಗಿ ಬಟ್ಟೆ ಬ್ಯಾಗ್ ಗಳನ್ನು ವಿತರಿಸುವ ಕಾರ್ಯಕ್ಕೆ ಚಾಲನೆ ನೀಡಿ ಶಾಸಕರು ಮಾತನಾಡಿದರು.
ಕಡ್ಡಾಯವಾಗಿ ಎಲ್ಲಾ ಮನೆಯವರು ಪ್ಲಾಸ್ಟಿಕ್ ಬಳಕೆ ಕೈ ಬಿಡಬೇಕು, ಬಟ್ಟೆ ಬ್ಯಾಗ್ ಗಳನ್ನು ಬಳಕೆ ಮಾಡಬೇಕು ಎಂದು ಸಲಹೆ ನೀಡಿದರು.
ಪ್ಲಾಸ್ಟಿಕ್ ಮುಕ್ತ ನಗರ ಅಭಿಯಾನಕ್ಕೆ ಸಹಕಾರ ಕೋರಿದರು, ಇಂದು ವಲಯ ಮೂರರ ವ್ಯಾಪ್ತಿಯ ಕುವೆಂಪು ನಗರದ ಭಾಗದಲ್ಲಿ ಬಟ್ಟೆ ಬ್ಯಾಗ್ ವಿತರಿಸಲಾಯಿತು.
ಈ ವೇಳೆ ವಲಯ ಆಯುಕ್ತ ಸತ್ಯಮೂರ್ತಿ,ಪರಿಸರ ವಲಯ ಅಧಿಕಾರಿ ಅರ್ಪಿತಾ,ಇಂಜಿನಿಯರ್ ಮಣಿ, ನಗರಪಾಲಿಕೆ ಮಾಜಿ ಸದಸ್ಯ ರಮೇಶ್, ಜೋಗಿ ಮಂಜು,ಮನೋಜ್,ನಾಗೇಂದ್ರ,
ರಾಜೇಶ್,ಹೇಮಂತ,ಪ್ರಸಾದ್,ರವಿ,ಛಾಯ,ಪ್ರದೀಪ್,ಕಿಶೋರ್, ಅಪ್ತ ಸಹಾಯಕ ಆದಿತ್ಯ, ಗೋವಿಂದ,ವಸಂತ,ಮತ್ತಿತರರು ಹಾಜರಿದ್ದರು.