Tue. Dec 24th, 2024

ಜಲಪಾತಗಳಿಗೆ ಪ್ರವಾಸಿಗರಿಗೆ ನಿಷೇಧ

Share this with Friends

ಬೆಳಗಾವಿ,ಜು.6: ವೀಕೆಂಡ್ ನಲ್ಲಿ ಜಲಪಾತಗಳಿಗೆ ಹೋಗಿ ಮೋಜು ಮಸ್ತಿ ಮಾಡುವವರಿಗೆ ಮಹಾರಾಷ್ಟ್ರದ ಲೊನಾವಾಲಾ ದುರಂತ ಎಚ್ಚರಿಕೆಯ ಗಂಟೆಯಾಗಿದೆ.

ಕಳೆದ ವಾರವಷ್ಟೇ ಮಹಾರಾಷ್ಟ್ರದ ಲೊನಾವಾಲಾಗೆ ಬಂದಿದ್ದ ಒಂದೇ ಕುಟುಂಬದವರು ಜಲಪಾತದಲ್ಲಿಳಿದು ನೀರಿನ ಸೆಳೆತಕ್ಕೆ ಸಿಕ್ಕಿ ಆರು ಮಂದಿ ಪ್ರಾಣ ಕಳೆದುಕೊಂಡರು.

ಈ ದುರಂತದ ಬಳಿಕ ಎಚ್ಚೆತ್ತ ಬೆಳಗಾವಿ ಅರಣ್ಯ ಇಲಾಖೆ ಜಲಪಾತಗಳಿಗೆ ಪ್ರವಾಸಿಗರು ಬರಕೂಡದೆಂದು ನಿಷೇಧ ಹೇರಿದೆ.

ಮಹಾರಾಷ್ಟ್ರ, ಪಶ್ಚಿಮ ಘಟ್ಟ ಭಾಗದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ 7 ಜಲಪಾತಗಳು ತುಂಬಿ ಹರಿಯುತ್ತಿವೆ.

ಬಟಾವಡೆ ಫಾಲ್ಸ್, ಚಿಕ್ಕಲೆ ಫಾಲ್ಸ್, ಪಾರವಾಡ ಫಾಲ್ಸ್, ಚೋರ್ಲಾ ಫಾಲ್ಸ್, ವಜ್ರಾ ಫಾಲ್ಸ್ ಸೇರಿದಂತೆ 7 ಜಲಪಾತಗಳಿಗೆ ಪ್ರವಾಸಿಗರಿಗೆ ನಿರ್ಬಂಧಿಸಲಾಗಿದೆ ಜತೆಗೆ
ಯಾರೂ ಬಾರದಂತೆ ತಡೆಯಲು ಅರಣ್ಯ ಇಲಾಖೆ ಗಸ್ತು ಸಿಬ್ಬಂದಿಗಳನ್ನು ನೇಮಕ ಮಾಡಿದೆ.

ವೀಕೆಂಡ್ ಹಿನ್ನೆಲೆಯಲ್ಲಿ ಪ್ರವಾಸಿಗರು ಈ ಭಾಗದ ಜಲಪಾತಗಳ ವೀಕ್ಷಣೆಗೆ ಆಗಮಿಸುತ್ತಾರೆ. ಭಾರೀ ಮಳೆಯಾಗುತ್ತಿರುವುದರಿಂದ ನದಿಗಳು‌ ಅಪಾಯದ ಮಟ್ಟ ಮೀರಿ ಹರಿಯುತ್ತಿವೆ ಹಾಗಾಗಿ ಮುಂಜಾಗೃತಾ ಕ್ರಮವಾಗಿ ಜಲಪಾತಗಳಿಗೆ ಪ್ರವಾಸಿಗರು ಬಾರದಂತೆ ನಿರ್ಬಂಧ ವಿಧಿಸಲಾಗಿದೆ.


Share this with Friends

Related Post