ಬಿಸಿ ನೀರು ಸೇವಿಸುವುದು ಮೃದುವಾದ ಪಚನ, ಹೊಳೆಯುವ ಚರ್ಮ ಮತ್ತು ಆರೋಗ್ಯಕರ ಮೂತ್ರಪಿಂಡ ಸೇರಿದಂತೆ ಹಲವಾರು ಪ್ರಯೋಜನಗಳಿವೆ ಎಂದು ಕೇಳಿದ್ದಿರಾ. ಅದರಲ್ಲೂ ಕೊರೋನಾ ವೈರಸ್ ಸಾಂಕ್ರಾಮಿಕ ಪ್ರಾರಂಭವಾದಾಗಿನಿಂದ, ಬಹುತೇಕ ಎಲ್ಲಾ ಭಾರತೀಯ ಮನೆಗಳಲ್ಲಿ ಬಿಸಿ ನೀರಿನ ಸೇವನೆಯು ಹೆಚ್ಚು ಕಡಿಮೆ ವಾಡಿಕೆಯಾಗಿದೆ. ಬಿಸಿನೀರು ಸೇವಿಸುವುದರಿಂದ ನಾನಾ ಪ್ರಯೋಜಗಳಿದೆಯಾದರೂ, ಇದನ್ನೆ ಹೇರಳವಾಗಿ ಕುಡಿಯುತ್ತಿದ್ದರೆ ಹಲವು ನಕಾರತ್ಮಕ ಪರಿಣಾಮಗಳು ಉಂಟಾಗುವ ಸಾಧ್ಯತೆ ಇದೆ ಎಂದು ತಜ್ಞರು ಹೇಳಿದ್ದಾರೆ.
ಬಿಸಿನೀರು, ದೇಹದ ರಕ್ತದ ಪ್ರಮಾಣದಲ್ಲಿ ಹೆಚ್ಚಳಕ್ಕೆ ಕಾರಣವಾಗಬಹುದು. ಬಿಸಿನೀರು, ರಕ್ತ ಪರಿಚಲನೆ ಮತ್ತು ಒತ್ತಡವನ್ನು ವೇಗವಾಗಿ ವರ್ಧಿಸುತ್ತದೆ. ಇದು ಅನೇಕರಿಗೆ ಆಘಾತವನ್ನು ಉಂಟುಮಾಡಬಹುದು, ಆದರೆ ಹೆಚ್ಚು ಬಿಸಿ ನೀರನ್ನ ಕುಡಿಯುವುದು ಮೂತ್ರಪಿಂಡಗಳ ಮೇಲೆ ಅನಗತ್ಯ ಒತ್ತಡವನ್ನು ಉಂಟುಮಾಡುತ್ತದೆ, ಅವುಗಳ ಕಾರ್ಯನಿರ್ವಹಣೆಗೆ ಅಡ್ಡಿಪಡಿಸುತ್ತದೆ. ನೀರು ನಮ್ಮ ಮೂತ್ರದ ವ್ಯವಸ್ಥೆಗೆ ಎಷ್ಟು ಅವಶ್ಯಕ ಎಂದು ತಿಳಿದೆ ಇದೆ, ಬಿಸಿನೀರಿನ ಬದಲು ಸಾಮಾನ್ಯ ನೀರು ಕುಡಿಯುವುದೆ ಉತ್ತಮ.
ಹೊಟ್ಟೆ ಬೆಚ್ಚಗಾಗಬಾರದು ಎಂದು ನೀವು ಆಗಾಗ್ಗೆ ಕೇಳಿರಬಹುದು. ಬಿಸಿನೀರನ್ನು ಹೇರಳವಾಗಿ ಕುಡಿಯುವವರಲ್ಲಿ ಆಗಾಗ ಜೀರ್ಣಕ್ರಿಯೆ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಬಿಸಿ ನೀರು, ದೇಹದ ಉಷ್ಣತೆಯನ್ನು ಹೆಚ್ಚಿಸುತ್ತದೆ. ಅದರಲ್ಲು ಖಾಲಿ ಹೊಟ್ಟೆಯಲ್ಲಿ ಬಿಸಿನೀರು ತೆಗೆದುಕೊಂಡರೆ ಜಠರದುರಿ ತೊಂದರೆಗಳಿಗೆ ಕಾರಣವಾಗುತ್ತದೆ.
ಈ ದಿನಗಳಲ್ಲಿ ನೀರಿನ ಗುಣಮಟ್ಟವು ಒಂದು ಜಾಗತಿಕ ಕಾಳಜಿಯಾಗಿದೆ. ಬಿಸಿನೀರನ್ನ ಕಲುಷಿತಗಳಿಗೆ ಉತ್ತಮ ಸ್ನೇಹಿತ ಎನ್ನುತ್ತಾರೆ. ಏಕೆಂದರೆ ಬಿಸಿನೀರು ತಣ್ಣೀರಿಗಿಂತ ಹೆಚ್ಚು ಸುಲಭವಾಗಿ ಮಾಲಿನ್ಯಕಾರಕಗಳು ಮತ್ತು ವಿಷಗಳನ್ನು ಕರಗಿಸುತ್ತದೆ.
ದಿನಪೂರ್ತಿಬಿಸಿ ನೀರು ಕುಡಿಯೋ ಅಭ್ಯಾಸ ಆರೋಗ್ಯಕ್ಕೆ ತೊಂದ್ರೆಯನ್ನೂ ಉಂಟು ಮಾಡಬಹುದು. ಬಿಸಿನೀರು ಕುಡಿಯುವ ಪ್ರಾಥಮಿಕ ಅಪಾಯವೆಂದರೆ ಗಂಟಲು ಸುಡುವುದು. ಬೆರಳಿನ ತುದಿಯಲ್ಲಿ ಆಹ್ಲಾದಕರವೆನಿಸುವ ಬೆಚ್ಚಗಿರುವ ನೀರು ನಾಲಿಗೆ ಅಥವಾ ಗಂಟಲನ್ನು ಸುಡಬಹುದು. ಒಬ್ಬ ವ್ಯಕ್ತಿಯು ಕುದಿಯುವ ತಾಪಮಾನದ ಸಮೀಪವಿರುವ ನೀರನ್ನು ಸೇವಿಸುವುದನ್ನು ತಪ್ಪಿಸಬೇಕು. ನೀರನ್ನು ಕುಡಿಯುವ ಮೊದಲು ಒಂದು ಸಿಪ್ ತೆಗೆದುಕೊಂಡು ಬಿಸಿಯ ಪ್ರಮಾಣವನ್ನು ಪರಿಶೀಲಿಸಬೇಕು.
ದೇಹದ ವಾತಾವರಣದಲ್ಲಿಯೂ ಕುದಿಯುವ ನೀರನ್ನು ಕುಡಿಯುವ ಅಭ್ಯಾಸ ದೇಹ ಹೆಚ್ಚು ಬೆವರಲು ಕಾರಣವಾಗುತ್ತದೆ. ಅತಿಯಾದ ಬೆವರುವಿಕೆ ತುರಿಕೆ, ಚರ್ಮ ಸಂಬಂಧಿತ ಸಮಸ್ಯೆಗಳನ್ನು ಉಂಟು ಮಾಡಬಹುದು. ಬಿಸಿನೀರು ಕುಡಿಯುವುದರಿಂದ ಯಾವುದೇ ಕಾಯಿಲೆಗಳು ವಾಸಿಯಾಗುವುದಿಲ್ಲ. ಆದ್ದರಿಂದ ಈಗಾಗಲೇ ಬಿಸಿನೀರನ್ನು ಆನಂದಿಸುವ ಮಂದಿ ತಮ್ಮ ಆರೋಗ್ಯವನ್ನು ಸುಧಾರಿಸಲು ಸರಳವಾದ ವಿಧಾನವನ್ನು ಪ್ರಯತ್ನಿಸಬಹುದ.