Wed. Apr 23rd, 2025

ಚನ್ನಪಟ್ಟಣ ಉಪ ಚುನಾವಣೆ: ಮುಖಂಡರೊಂದಿಗೆ ಹೆಚ್ ಡಿ ಕೆ ಸಭೆ

Share this with Friends

ಚನ್ನಪಟ್ಟಣ, ಜು.7: ಚನ್ನಪಟ್ಟಣ ವಿಧಾನಸಭೆ ಉಪ ಚುನಾವಣೆಗೆ ಸಂಬಂಧಿಸಿದಂತೆ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಅವರು ಚನ್ನಪಟ್ಟಣ ಕ್ಷೇತ್ರದ ಪಕ್ಷದ ಮುಖಂಡರ ಜತೆ ಚರ್ಚೆ ನಡೆಸಿದರು.

ಕೇಂದ್ರ ಸರಕಾರದ ಭಾರೀ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವರೂ‌ ಆಗಿರುವ ಕುಮಾರಸ್ವಾಮಿಯವರ ತೀರ್ಮಾನಕ್ಕೆ ಉಪಚುನಾಣೆ ವಿಚಾರವನ್ನು ಬಿಡಲಾಗಿದೆ.ಹಾಗಾಗಿ ಅವರು ಮುಖಂಡರೊಂದಿಗೆ ಇಂದು ಸುದೀರ್ಘ ಚರ್ಚೆ ನಡೆಸಿದರು.

ಜೆಡಿಎಸ್ ಯುವ ಮುಖಂಡ ನಿಖಿಲ್ ಕೂಡಾ ಹಾಜರಿದ್ದರು. ಉಪಚುನಾವಣೆಯಲ್ಲಿ ಯಾರನ್ನೇ ಅಭ್ಯರ್ಥಿ ಮಾಡಿದರೂ ಅವರ ಗೆಲುವಿಗೆ ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕೆಂದು ಈ ವೇಳೆ ಮುಖಂಡರು, ಕಾರ್ಯಕರ್ತರಿಗೆ ಹೆಚ್ ಡಿ ಕೆ ಸಲಹೆ ನೀಡಿದರು.


Share this with Friends

Related Post