ಮೈಸೂರು,ಜು.9: ಸರ್ಕಾರಿ ಜಾಗಗಳು,ನಿವೇಶನಗಳು ದುರ್ಬಳಕೆ ಆಗುತ್ತಿದ್ದರೆ,ಇತ್ತ ಸಿಎ ನಿವೇಶನವೊಂದು ಭಾರಿ ವಾಹನಗಳ ನಿಲುಗಡೆಯ ತಾಣವಾಗಿ ಪರಿಣಮಿಸಿದೆ.
ಪ್ರತಿಷ್ಟಿತ ಬಡಾವಣೆಯಲ್ಲಿ ಹಾಗೂ ಕಾನೂನು ಮತ್ತು ಸುವ್ಯವಸ್ಥೆಯನ್ನ ಪಾಲಿಸಬೇಕಾದ ಪೊಲೀಸ್ ಠಾಣೆಯ ಸಮೀಪದಲ್ಲೇ ಸಿಎ ಭಾರಿ ವಾಹನಗಳ ನಿಲುಗಡೆಯ ತಾಣವಾಗಿ ದ್ದರೂ ಯಾವುದೇ ಅಧಿಕಾರಿಯಾಗಲಿ ಅಥವಾ ಜನಪ್ರತಿನಿಧಿಯಾಗಲಿ ತಲೆ ಕೆಡಿಸಿಕೊಂಡಿಲ್ಲ.
ಹೆಬ್ಬಾಳ ಬಡಾವಣೆ ವಾರ್ಡ್ ನಂ 5, ಹೆಬ್ಬಾಳ ಪೊಲೀಸ್ ಠಾಣೆ ಸಮೀಪ ಕುವೆಂಪುವೃತ್ತದ ಬಳಿ ಸಿಎ ನಿವೇಶನ ಖಾಲಿ ಬಿದ್ದಿದ್ದರೂ
ಪಾಲಿಕೆ ಅಧಿಕಾರಿಯಾಗಲಿ ಅಥವಾ ಮುಡಾ ಅಧಿಕಾರಿಗಳಾಗಲಿ ಈ ನಿವೇಶನ ಸಂರಕ್ಷಣೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಹೇಳುವವರು ಯಾರೂ ಇಲ್ಲದ ಕಾರಣ ಕೆಲ ಚಾಲಕರು ಭಾರಿ ವಾಹನಗಳನ್ನ ಎಲ್ಲೆಂದರಲ್ಲಿ ನಿಲ್ಲಿಸಿಕೊಂಡಿದ್ದಾರೆ.
ಕೆಲವು ವಾಹನಗಳನ್ನು ರಸ್ತೆಯಲ್ಲೇ ನಿಲ್ಲಿಸಿದ್ದಾರೆ.ಮತ್ತೆ ಕೆಲವು ವಾಹನಗಳು ಹೆಬ್ಬಾಳ ಠಾಣೆಗೆ ಹೊಂದಿಕೊಂಡಿರುವ ಕಾಂಪೌಂಡ್ ಒಳಗೇ ನಿಂತಿವೆ.
ರಸ್ತೆ ಆಕ್ರಮಿಸಿಕೊಂಡಿರುವ ವಾಹನಗಳಿಂದ ಇತರೆ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ ಜತೆಗೆ ಅಪಾಯಕ್ಕೆ ಆಹ್ವಾನ ನೀಡುತ್ತಿವೆ.
ಅನಾಹುತ ಸಂಭವಿಸುವ ಮುನ್ನ ಸಂಭಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ.ಸಿಎ ನಿವೇಶನಕ್ಕೆ ಬೇಲಿ ಹಾಕಿ ಸಂರಕ್ಷಿಸಬೇಕಿದೆ.