Wed. Dec 25th, 2024

ರೋಟರಿ ಸೆಂಟ್ರಲ್ ಅಧ್ಯಕ್ಷರಾಗಿ ಸುಬ್ರಹ್ಮಣ್ಯ ಆರ್ ತಂತ್ರಿ ಅಧಿಕಾರ ಸ್ವೀಕಾರ

Share this with Friends

ಮೈಸೂರು,ಜು.9: ರೋಟರಿ ಸೆಂಟ್ರಲ್ ಮೈಸೂರಿನ 2024- 25 ನೇ ಸಾಲಿನ ಪದಗ್ರಹಣ ಸಮಾರಂಭದಲ್ಲಿ ನೂತನ ಅಧ್ಯಕ್ಷರಾಗಿ ಸುಬ್ರಹ್ಮಣ್ಯ ಆರ್ ತಂತ್ರಿ ಗೌರವಾಧ್ಯಕ್ಷರಾಗಿ ಸಮರ್ಥ್ ವೈದ್ಯ ಪ್ರತಿಜ್ಞಾವಿಧಿ ಸ್ವೀಕರಿಸಿದರು

ಸಮಾರಂಭದಲ್ಲಿ ಮಾತನಾಡಿದ ರಾಮಕೃಷ್ಣ ಆಶ್ರಮದ ಪೂಜ್ಯ ಸ್ವಾಮಿ
ಯುಕ್ತಶ ನಂದಾಜಿ ಮಹಾರಾಜ್,
ದುಡಿಮೆಯ ಅಲ್ಪ ಭಾಗವನ್ನು ಸಮಾಜ ಸೇವೆಗೆ ಮೀಸಲಿರುವ ಸಂಕಲ್ಪ ತೊಡಬೇಕು ಎಂದು ಸಲಹೆ ನೀಡಿದರು.

ವಿಶ್ವದಲ್ಲೇ ಪೋಲಿಯೋ ನಿರ್ಮೂಲನೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ರೋಟರಿ ಕ್ಲಬ್ ನ ಸಾಮಾಜಿಕ ಸೇವಾ ಕಾರ್ಯಗಳು ಶ್ಲಾಘನೀಯ ಎಂದು ಹೇಳಿದರು

ನೂತನ ಅಧ್ಯಕ್ಷ ಸುಬ್ರಹ್ಮಣ್ಯ ಆರ್ ತಂತ್ರಿ ಮಾತನಾಡಿ,ವಿಶ್ವದಲ್ಲೆಡೆ ಇರುವ ಲಕ್ಷಾಂತರ ರೋಟರಿ ಸದಸ್ಯರು ರೋಟರಿಗೆ ನೀಡುವ ಪ್ರತಿ ಪೈಸೆಯೂ ಸದ್ಬಳಿಕೆಯಾಗುತ್ತಿದ್ದು, ಸಮಾಜದ ವಿವಿಧ ಕಾರ್ಯಕ್ಕೆ ಉಪಯೋಗವಾಗುತ್ತಿದೆ ಎಂದು ತಿಳಿಸಿದರು.

ರೋಟರಿ ಪ್ರಧಾನ ಅಧಿಕಾರಿ ಸತೀಶ್ ಬೋಲಾರ್, ನಿಕಟ ಪೂರ್ವಾಧ್ಯಕ್ಷರಾದ ಎನ್ ಉಮೇಶ್, ರೋ ಸಹಾಯಕ ಗವರ್ನರ್ ಚೇತನ್ ವಿಶ್ವನಾಥ್, ನಿಕಟಪೂರ್ವ ಕಾರ್ಯದರ್ಶಿ ಪ್ರೇಮ್ ಸಾಗರ್, ಉಪಾಧ್ಯಕ್ಷ ವಿಜಯೇಂದ್ರ ಹಾಗೂ ಎ ಆರ್ ರವೀಂದ್ರ ಭಟ್,ಆಂಟೋನಿ ಮೋಸೆಸ್, ಅನಿಲ್ ಪದಕಿ, ಗುರುಪ್ರಸಾದ್, ಸಚ್ಚಿದಾನಂದ ಮೂರ್ತಿ, ಜಯಪ್ರಕಾಶ್ ಎಂ ಎಸ್, ಎಸ್ ಆರ್ ಸ್ವಾಮಿ, ದಿನೇಶ್, ಅರುಣ್, ಜ್ಯೋತಿ ಅಶೋಕ್, ರಜನಿ, ವಿವೇಕ್ ಮತ್ತಿತರರು ಹಾಜರಿದ್ದರು.


Share this with Friends

Related Post