Wed. Dec 25th, 2024

ಐಎಎಸ್ ಅಧಿಕಾರಿಮನೋಜ್ ಜೈನ್ ಗೆ ಸಿಎಂ ಕುವೆಂಪು ಪಾಠ!

Share this with Friends

ಬೆಂಗಳೂರು, ಜು.9: ವಿಧಾನಸೌಧದಲ್ಲಿಂದು ನಡೆದ ಡಿಸಿ,ಸಿಇಒಗಳೊಂದಿಗಿನ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ‌‌ ಐಎಎಸ್ ಅಧಿಕಾರಿಗೆ ಪಾಠ ಮಾಡಿದ ಪ್ರಸಂಗ ನಡೆಯಿತು.

ಅಲ್ಪಸಂಖ್ಯಾತ ಇಲಾಖೆ ಕುರಿತಾದ ಚರ್ಚೆ ನಡೆಯುತಿದ್ದ ಸಂದರ್ಭದಲ್ಲಿ ಇಲಾಖೆ ಕಾರ್ಯದರ್ಶಿ ಮನೋಜ್ ಜೈನ್ ಅವರು ಇಂಡೀಕರಣ ಎಂಬ ಪದ ಬಳಕೆ ಮಾಡಿದರು.

ಆಗ‌ ಮುಖ್ಯ ಮಂತ್ರಿಗಳು ಯಾವುದಾದರೂ ಇಂಗ್ಲಿಷ್ ಪದಕ್ಕೆ ಕನ್ನಡದಲ್ಲಿ ಸೂಕ್ತ ಪದ ಇಲ್ಲದಿದ್ದರೆ ಅದನ್ನು ಇಂಗ್ಲಿಷ್ ನಲ್ಲೇ ಬಳಸಬೇಕು ಎಂದು ಕುವೆಂಪು ಹೇಳಿದಾರೆ ಗೊತ್ತೇನ್ರಿ ಎಂದು ಹೇಳಿದರು.

ಕುವೆಂಪು ಅವರ ಮಾತನ್ನು ಪ್ರಸ್ತಾಪಿಸಿದ ಸಿದ್ದರಾಮಯ್ಯ ಅವರು ಇಂಡೀಕರಣ ಪದ ಬಳಕೆ ಮಾಡಿದರೆ ಬಹಳಷ್ಟು ಜನರಿಗೆ ಅರ್ಥ ಆಗುವುದಿಲ್ಲ ಆದ್ದರಿಂದ ಮ್ಯೂಟೇಷನ್ ಪದವನ್ನೇ ಬಳಸಿ ಎಂದು ಸಲಹೆ ನೀಡಿದರು.

ಯಾವುದಾದರೂ ಇಂಗ್ಲಿಷ್ ಪದಕ್ಕೆ ಕನ್ನಡದಲ್ಲಿ ಸೂಕ್ತ ಪದ ಇಲ್ಲದಿದ್ದಾಗ ಅದನ್ನು ಇಂಗ್ಲಿಷ್ ನಲ್ಲೇ ಬಳಸಬೇಕು ಎಂದು ಕುವೆಂಪು ಹೇಳಿದಾರೆ ಗೊತ್ತಾ ಎಂದು ಸಿಎಂ ಪಾಠ ಮಾಡಿದರು. ಸಭೆಯಲ್ಲಿ ಪಾಲ್ಗೊಂಡಿದ್ದವರೆಲ್ಲ ಖುಷಿಯಿಂದ ಕುವೆಂಪು ಪಾಠ ಆಲಿಸಿದರು.


Share this with Friends

Related Post