Thu. Dec 26th, 2024

ದಕ್ಷಿಣ ಕಾಶಿಯಲ್ಲಿ ಗಿರಿಜಾ ಕಲ್ಯಾಣ: ಸಹಸ್ರಾರು ಭಕ್ತರು ಭಾಗಿ

Share this with Friends

ನಂಜನಗೂಡು,ಜು.10: ದಕ್ಷಿಣಕಾಶಿ ನಂಜನಗೂಡು ಶ್ರೀಕಂಠೇಶ್ವರ ದೇವಾಲಯದಲ್ಲಿ ಗಿರಿಜಾ ಕಲ್ಯಾಣ ಸಂಭ್ರಮ
ಕಳೆಗಟ್ಟಿದೆ.

ಒಂದುವಾರ ಗಳ ಕಾಲ ನಡೆಯಲಿರುವ ಗಿರಿಜಾ ಕಲ್ಯಾಣ ಮಹೋತ್ಸವಕ್ಕೆ ಸಹಸ್ರಾರು ಭಕ್ತರು ಸಾಕ್ಷಿಯಾಗುತಿದ್ದಾರೆ.

ಮಂಗಳವಾರ ರಾತ್ರಿಯಿಂದ ಪ್ರಾರಂಭವಾದ ಗಿರಿಜಾ ಕಲ್ಯಾಣ ಮಹೋತ್ಸವದ ಪೂಜಾ ಕೈಂಕರ್ಯಗಳು ದೇವಸ್ಥಾನದ ಮುಖ್ಯ ಅರ್ಚಕರಾದ ನಾಗಚಂದ್ರ ಧೀಕ್ಷಿತ್ ರವರ ನೇತೃತ್ವದಲ್ಲಿ ನಡೆಯುತ್ತಿದೆ.

ನಂಜುಂಡೇಶ್ವರ ಹಾಗೂ ಪಾರ್ವತಿ ದೇವಿಯವರ ಉತ್ಸವ ಮೂರ್ತಿಗಳನ್ನ ದೇವಸ್ಥಾನದ ಆವರಣದಲ್ಲಿರುವ ಕಲ್ಯಾಣ ಮಂಟಪದಲ್ಲಿ ಪ್ರತಿಷ್ಠಾಪಿಸಿ ಗಿರಜಾ ಕಲ್ಯಾಣ ನೆರವೇರಿಸಲಾಗುತ್ತಿದೆ.

ಪ್ರತಿವರ್ಷ ಆಷಾಢ ಮಾಸದಲ್ಲಿ ಗಿರಿಜಾ ಕಲ್ಯಾಣ ಮಹೋತ್ಸವ ನೆರವೇರಿಸಲಾಗುತ್ತದೆ.ನಿನ್ನೆ ರಾತ್ರಿಯಿಂದ ಆರಂಭವಾದ ಕಲ್ಯಾಣ ಮಹೋತ್ಸವವನ್ನ ಕಣ್ತುಂಬಿಕೊಳ್ಳಲು ನಾಡಿನ ವಿವಿದ ಭಾಗಗಳಿಂದ ಭಕ್ತರು ಆಗಮಿಸಿದ್ದಾರೆ.

ಒಂದು ವಾರ ಕಾಲ ಪ್ರತಿದಿನ ಗಿರಿಜಾ ಕಲ್ಯಾಣ ಮಹೋತ್ಸವ ನೆರವೇರಲಿದೆ.


Share this with Friends

Related Post