Sat. Nov 2nd, 2024

ಮುಡಾ ಹಗರಣ ಸಿಬಿಐಗೆ ವಹಿಸಲು ಸಿಎಂ ನಿರಾಕರಣೆ

Share this with Friends

ಮೈಸೂರು,ಜು.10: ಮುಡಾ ಹಗರಣವನ್ನ ಸಿಬಿಐಗೆ ವಹಿಸಲು ಸಿಎಂ ಸಿದ್ದರಾಮಯ್ಯ ಸ್ಪಷ್ಟವಾಗಿ ನಿರಾಕರಿಸಿದ್ದಾರೆ.

ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಈ ಕುರಿತು ಪ್ರತಿಕ್ರಿಯಿಸಿದ ಸಿಎಂ,
ನಮ್ಮ ಪೊಲೀಸರು ತನಿಖೆ ವಿಚಾರದಲ್ಲಿ ಸಮರ್ಥರಿದ್ದಾರೆ ಎಂದು ತಿಳಿಸಿದರು.

ಎಲ್ಲದಕ್ಕೂ ಸಿಬಿಐ ಸಿಬಿಐ ಅನ್ನುವ ಬಿಜೆಪಿ ತಮ್ಮ ಅವಧಿಯಲ್ಲಿ ಅದೆಷ್ಟು ಕೇಸ್ ಗಳನ್ನ ಸಿಬಿಐಗೆ ಕೊಟ್ಟಿದೆ ಹೇಳಿ ಎಂದು ಮಾಧ್ಯಮದವರನ್ನೆ ಸಿಎಂ ಪ್ರಶ್ನಿಸಿದರು.

ಎಷ್ಟು ಸಲ ಮುಡಾ ಬಗ್ಗೆ ಹೇಳುವುದು.
ಮುಡಾದಲ್ಲಿ 50:50 ಅನುಪಾತ ರದ್ದಾಗಿದೆ.
ನನ್ನ ಪತ್ನಿಯ ವಿಚಾರವನ್ನ ವಿವಾದ ಮಾಡುತ್ತಿದ್ದಾರೆ,ನಾನು ವಿಜಯನಗರದಲ್ಲಿ ಸೈಟ್ ಕೊಡಿ ಎಂದು ಕೇಳಿಲ್ಲ,
ನಮ್ಮ ಜಮೀನನ್ನ ನಿಯಮಬಾಹಿರವಾಗಿ ಭೂಸ್ವಾಧೀನ ಮಾಡಿಕೊಂಡಿದ್ದಾರೆ,
ಅದಕ್ಕೆ ಅವರೇ ತಪ್ಪಾಯಿತು ಎಂದು ಹೇಳಿ ಸೈಟ್ ಕೊಟ್ಟಿದ್ದಾರೆ.ಇದರಲ್ಲಿ ಯಾವ ವಿವಾದ ಇದೆ,ಸುಮ್ಮನೇ ಪ್ರತಿಭಟನೆ ಮಾಡುತ್ತೇವೆ, ಮುತ್ತಿಗೆ ಹಾಕುತ್ತೇವೆ ಎಂದು ಹೇಳುತ್ತಿದ್ದಾರೆ ಎಂದು ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಗರಂ ಆದರು.

ಮುಡಾ ಅಕ್ರಮದ ಬಗ್ಗೆ ಇಬ್ಬರು ಐಎಎಸ್ ಅಧಿಕಾರಗಳ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ,ತನಿಖೆಯಲ್ಲಿ ತಪ್ಪಾಗಿದೆ ಎಂಬುದು ಗೊತ್ತಾದರೇ ಎಲ್ಲರೂ ಮೇಲೂ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದರು.

ರಾಮನಗರ ಜಿಲ್ಲೆಯ ಹೆಸೆರು ಬದಲಾವಣೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿಎಂ,ನಿನ್ನೆ
ರಾಮನಗರ ಜಿಲ್ಲೆಯ ಮುಖಂಡರು ಬಂದು ಮನವಿ ಕೊಟ್ಟಿದ್ದಾರೆ,ಹಿಂದಿನಿಂದಲೂ ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಹೆಸರು ಬದಲಾಗಬೇಕೆಂಬುದು ಅವರ ಇಚ್ಚೆ,ಅವರ ಮನವಿಯನ್ನು ಕ್ಯಾಬಿನೆಟ್ ನಲ್ಲಿಟ್ಟು ತೀರ್ಮಾನ ಮಾಡುತ್ತೇವೆ ಎಂದು ತಿಳಿಸಿದರು.

ನಾವು ಬಂದರೇ ಹೆಸರು ಕಿತ್ತಾಕುತ್ತೇವೆ ಎಂದು ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಹೇಳಿದ್ದಾರಲ್ಲಾ ಎಂಬ ವರದಿಗಾರರ ಪ್ರಶ್ನೆಗೆ,
ಅವರು ಅಧಿಕಾರಕ್ಕೆ ಬಂದರೆ ತಾನೇ ಕಿತ್ತಾಕೋದು ಎಂದು ಸಿದ್ದು ತಿರುಗೇಟು ನೀಡಿದರು.

ಜನರು ಆಶೀರ್ವಾದ ಮಾಡಿದ ಕಾರಣ ನಾನು ಸಿಎಂ ಆಗಿದ್ದೇನೆ,ಇವರಿಗೆ ಜನರೇ ಆಶೀರ್ವಾದ ಮಾಡುವುದಿಲ್ಲ, ಇನ್ನೆಲ್ಲಿಂದ ಸಿಎಂ ಆಗ್ತಾರೆ ಎಂದು ಟಾಂಗ್ ನೀಡಿದರು

ಮಾಜಿ ಸಚಿವ ನಾಗೇಂದ್ರ ಮನೆ ಮೇಲೆ ಇಡಿ ದಾಳಿ ವಿಚಾರಕ್ಕೆ ಪ್ರತಿಕ್ರಿಯಿಸಿದ
ಇಡಿ ಅಧಿಕಾರಿಗಳು ಅವರ ಕೆಲಸವನ್ನ ಅವರು ಮಾಡುತ್ತಾರೇ,
ಇದರ ಬಗ್ಗೆ ನಾನು ಹೆಚ್ಚು ಹೇಳುವುದಿಲ್ಲ,
ದಾಳಿ ಮಾಡಲಿ ನಾವು ಅದರ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ ಎಂದು ಸಿದ್ದರಾಮಯ್ಯ ಹೇಳಿದರು.


Share this with Friends

Related Post