Thu. Dec 26th, 2024

ಹನಿಟ್ರ್ಯಾಪ್ ಮಾಡಿ ವಂಚಿಸುತ್ತಿದ್ದ ಅಪ್ರಾಪ್ತ ಬಾಲಕಿ ಸೇರಿ 8 ಮಂದಿ ಬಂಧನ

Share this with Friends

ಕೊಡಗು,ಜು.10: ಹನಿಟ್ರ್ಯಾಪ್ ಮಾಡಿ ವಂಚಿಸುತ್ತಿದ್ದ ಅಪ್ರಾಪ್ತ ಬಾಲಕಿ ಸೇರಿದಂತೆ ಎಂಟು ಮಂದಿಯನ್ನು ಜಿಲ್ಲೆಯ ಕುಶಾಲನಗರ‌ ಪೊಲೀಸರು ಬಂಧಿಸಿದ್ದಾರೆ.

ಆನ್ ಲೈನ್ ಮೂಲಕ ಹುಡುಗಿಯರಿಂದ ಸೆಕ್ಸ್ ಮಸಾಜ್ ಮಾಡಿಸುವ ಆಸೆ ತೋರಿಸಿ, ಹುಡುಗಿಯರ ಫೋಟೊ ಕಳುಹಿಸಿ ಹಣ ಲೂಟಿ ಮಾಡುತ್ತಿದ್ದ ಈ ಜಾಲವನ್ನು ಭೇದಿಸಿ ಎಲ್ಲರು ಕಂಬಿ ಎಣಿಸುವಂತೆ ಮಾಡಿದ್ದಾರೆ.

ಹಾಸನ ಜಿಲ್ಲೆಯ ಸಕಲೇಶಪುರದ ಮಂಜುನಾಥ, ಸಂದೀಪ್ ಕುಮಾರ್ ಸಿ.ಎಸ್, ಸಿ.ಬಿ. ರಾಕೇಶ್, ಕೆ. ಜಯಲಕ್ಷ್ಮಿ, ಸಹನಾ, ಪಲ್ಲವಿ, ಅಭಿಷೇಕ್ ಮತ್ತು ಅಪ್ರಾಪ್ತ ಬಾಲಕಿ ಬಂಧಿತ ಆರೋಪಿಗಳು.

ಎಲ್ಲಾ ಎಂಟು ಆರೋಪಿಗಳನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದ್ದು,
ಈ ಗ್ಯಾಂಗ್ ಕುಶಾಲನಗರದ ಹುಡುಗಿ ಬೇಕಾ ಎಂದು ಆಮಿಷ ತೋರಿಸಿ ವಂಚನೆ ಮಾಡುತ್ತಿತ್ತು ಎಂದು ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ತಿಳಿಸಿದ್ದಾರೆ.

ಬಂಧಿತರಿಂದ ಎರಡು ಕಾರು, 17 ಮೊಬೈಲ್, ಒಂದು ಟ್ಯಾಬ್, ಒಂದು ಲ್ಯಾಪ್ಟಾಪ್ ಹಾಗೂ 24,800 ರೂಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.


Share this with Friends

Related Post