Thu. Dec 26th, 2024

ಅಕ್ರಮ ಅಸ್ತಿ ಗಳಿಕೆ:ಮೈಸೂರಿನಲ್ಲಿ ಅಧಿಕಾರಿ ಮನೆ ಮೇಲೆ ಲೋಕಾಯುಕ್ತ ದಾಳಿ

Share this with Friends

ಮೈಸೂರು, ಜು.11: ಅಕ್ರಮ ಅಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಮೈಸೂರಿನಲ್ಲಿ ಭ್ರಷ್ಟ ಅಧಿಕಾರಿ ಮನೆ ಮೇಲೆ ದಾಳಿ ಮಾಡಿ ಶಾಕ್ ನೀಡಿದ್ದಾರೆ.

ಚಾಮುಂಡಿ ಬೆಟ್ಟದ ರಸ್ತೆಯಲ್ಲಿರುವ ಕಬಿನಿ – ವರುಣ ಜಲಾಶಯ ಅಧೀಕ್ಷಕ ಅಭಿಯಂತರ ಮಹೇಶ್ ಮನೆ ಮೇಲೆ ಇಂದು‌ ಬೆಳ್ಳಂಬೆಳಿಗ್ಗೆ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದ್ದಾರೆ.

ಕರ್ನಾಟಕ ಲೋಕಾಯುಕ್ತ ಪೊಲೀಸ್ ಮಹಾ ನಿರ್ದೇಶಕ ಪ್ರಶಾಂತ್ ಕುಮಾರ್ ಟಾಗೋರ್, ಲೋಕಾಯುಕ್ತ ಪೊಲೀಸ್ ಮಹಾ ನಿರೀಕ್ಷಕ ಸುಬ್ರಮಣ್ಯೇಶ್ವರ ರಾವ್ ಹಾಗೂ ಮೈಸೂರು ಪ್ರಭಾರ ಎಸ್ಪಿ ಸುರೇಶ್ ಬಾಬು ಅವರ ಮಾರ್ಗ ದರ್ಶನದಲ್ಲಿ ಲೋಕಾಯುಕ್ತ ಡಿ ವೈ ಎಸ್ ಪಿ ಕೃಷ್ಣಯ್ಯ,ಇನ್ಸ್ ಪೆಕ್ಟರ್ ಗಳಾದ ರವಿ ಕುಮಾರ್, ಜಯರತ್ನ, ಲೋಕೇಶ್ ಹಾಗೂ ಲೋಕಾಯುಕ್ತ ಸಿಬ್ಬಂದಿಗಳಾದ ವೀರಭದ್ರ ಸ್ವಾಮಿ, ಪ್ರಕಾಶ್, ಗೋಪಿ, ತ್ರಿವೇಣಿ, ಮೋಹನ್ ಗೌಡ, ಮೋಹನ್ ಕುಮಾರ್, ದಿನೇಶ್, ಸುಂದ್ರೇಶ್ ಕಾರ್ಯ ಚರಣೆಯಲ್ಲಿ ಭಾಗವಹಿಸಿದ್ದು ಮಹೇಶ್ ಅವರ ಮನೆಯ ಮೂಲೆ,ಮೂಲೆಯನ್ನೂ
ಪರಿಶೀಲಿಸಿದ್ದಾರೆ.


Share this with Friends

Related Post