Sun. Apr 20th, 2025

ಅಭಿಮಾನಿಗಳೊಂದಿಗೆ ಶಿವಣ್ಣ‌ ಬರ್ತಡೆ ಇಲ್ಲ

Share this with Friends

ಬೆಂಗಳೂರು, ಜು.11: ಹ್ಯಾಟ್ರಿಕ್ ಹೀರೊ ಅಭಿಮಾನಿಗಳ ಪಾಲಿನ ಶಿವಣ್ಣ ಈ‌ ಬಾರಿ ತಮ್ಮ ಹುಟ್ಟುಹಬ್ಬ ಅಚರಿಸಿಕೊಳ್ಳದಿರಲು ತೀರ್ಮಾನಿಸಿದ್ದಾರೆ.

ನಾಳೆ ಅಂದರೆ ಜುಲೈ 12 ಶಿವರಾಜ್ ಕುಮಾರ್ ಜನುಮದಿನ,
ಅದಕ್ಕಾಗಿ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳಿಗೆ ಹೀಗೊಂದು ಮನವಿ ಮಾಡಿದ್ದಾರೆ.

ಅಭಿಮಾನಿ ದೇವರುಗಳಿಗೆ,
ಪ್ರತಿ ವರ್ಷ ನನ್ನ ಹುಟ್ಟುಹಬ್ಬ ದೊಡ್ಡ ಹಬ್ಬ ಆಗೋದು ನಿಮ್ಮ ಜೊತೆ ಕಳೆದಾಗ. ನೀವು ಅಕ್ಕರೆಯಿಂದ ಕೊಡೋ ಹ್ಯಾಂಡ್ ಶೇಕ್, ಪ್ರೀತಿಯ ಅಪ್ಪುಗೆ, ನೀಡೋ ಆಶೀರ್ವಾದ ನಿಮ್ಮ ಶಿವುಗೆ ಶ್ರೀರಕ್ಷೆ.

ಈ ವರ್ಷ ಬರ್ತಡೇಗೆ ನಿಮ್ಮ ಜೊತೆ ಇರೋದಕ್ಕೆ ಆಗೋದಿಲ್ಲ, ಆದರೆ ವರ್ಷವಿಡೀ ಒಟ್ಟಿಗೆ ಪ್ರತಿ ದಿನ ಸೆಲೆಬ್ರೇಟ್ ಮಾಡೋಣ.

ನಾನು ಬರ್ತಡೇಗೆ ಇಲ್ಲದೆ ಇದ್ರೂ ನಿಮ್ಮ ಜೊತೆ ರಣಗಲ್ ಇರ್ತಾನೆ,ಜುಲೈ 12 ರಂದು ಬೆಳಿಗ್ಗೆ 10.10ಕ್ಕೆ.
ನಿಮ್ಮ ಆಶೀರ್ವಾದ ಸದಾ ಇರಲಿ
ಶಿವಣ್ಣ ಎಂದು ಪತ್ರ ಬರೆದು ಕೋರಿದ್ದಾರೆ


Share this with Friends

Related Post