Fri. Dec 27th, 2024

ಖ್ಯಾತ ನಿರೂಪಕಿ ಅಪರ್ಣ ವಿಧಿವಶ

Share this with Friends

ಬೆಂಗಳೂರು,ಜು.11: ಕನ್ನಡ ಚಿತ್ರರಂಗದ ಖ್ಯಾತ ನಟಿ, ನಿರೂಪಕಿ ಅಪರ್ಣಾ ವಸ್ತಾರೆ ನಿಧನರಾಗಿದ್ದಾರೆ.

ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಬನಶಂಕರಿಯಲ್ಲಿರುವ ಸ್ವಗೃಹದಲ್ಲಿ ಮೃತಪಟ್ಟಿದ್ದಾರೆ.

ನಿರೂಪಣೆಯಷ್ಟೇ ಅಲ್ಲದೇ ಮಸಣದ ಹೂವು, ಇನ್ಸ್ ಪೆಕ್ಟರ್ ವಿಕ್ರಮ್ ಮತ್ತಿತರ ಚಿತ್ರಗಳಲ್ಲಿ ಅವರು ನಟಿಸಿದ್ದರು.

ನಮ್ಮ ಮೆಟ್ರೋ ಸೇರಿದಂತೆ ಅನೇಕ ಪ್ರಕಟಣೆಗಳಿಗೆ ಧ್ವನಿ ನೀಡಿದ್ದರು.ಅಪರ್ಣಾ ಅವರ ಕನ್ನಡ‌ ನಿರೂಪಣೆ ಅದ್ಭುತವಾಗಿತ್ತು.

ಮೂಡಲ ಮನೆ, ಮುಕ್ತ ಮುಕ್ತ ಧಾರವಾಹಿ ಅಲ್ಲದೆ ಸೃಜನ್ ಲೋಕೇಶ್ ಜೊತೆಗಿನ ಕಾಮಿಡಿ ಶೋನಲ್ಲೂ ನಟಿಸಿದ್ದರು, 2013 ರಲ್ಲಿ ಬಿಗ್ ಬಾಸ್ ಶೋ ನಲ್ಲೂ ಭಾಗವಹಿಸಿದ್ದರು.


Share this with Friends

Related Post