ಕೊಳ್ಳೇಗಾಲ,ಫೆ.15: ಈಚರ್ ವಾಹನದಲ್ಲಿ ಗಾಂಜಾ ಸಾಗಾಣಿಕೆ ಮಾಡುತ್ತಿದ್ದ ನಾಲ್ವರನ್ನು ಕೊಳ್ಳೇಗಾಲ ಗ್ರಾಮಾಂತರ ಪೊಲೀಸರು ಬಂಧಿಸಿ ಒಂದು ಕೋಟಿ ಬೆಲೆಯ ಗಾಂಜಾ ವಶಪಡಿಸಿಕೊಂಡಿದ್ದಾರೆ.
ಸೆಂತಿಲ್ ಕುಮಾರ್,ರವಿಕುಮಾರ್,
ಉಮಾಶಂಕರ್, ವಿನಯ್ ಬಂಧಿತ ಆರೋಪಿಗಳು.
ಕೊಳ್ಳೇಗಾಲ ಉಪ ವಿಭಾಗದ ಡಿವೈಎಸ್‌ಪಿ ಧರ್ಮೇಂದ್ರ ಅವರ ಖಚಿತ ಮಾಹಿತಿ ಮೇರೆಗೆ ಚಾಮರಾಜನಗರ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಪದ್ಮಿನಿ ಸಾಹೋ ಅವರ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕ ಶಿವ ಮಾದಯ್ಯ ಮತ್ತು ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್ಐ ಗಣೇಶ್ ಅವರ ನೇತೃತ್ವದಲ್ಲಿ ದಾಳಿ ನಡೆಸಲಾಯಿತು.
ಕೊಳ್ಳೇಗಾಲ ಪಟ್ಟಣದ ವರವಲಯದ ರಾಷ್ಟ್ರೀಯ ಹೆದ್ದಾರಿ ಮಧುವನಹಳ್ಳಿ ಬಳಿ ಮೊನ್ನೆ ಮಧ್ಯರಾತ್ರಿ ಅನುಮಾನಾಸ್ಪದವಾಗಿ ಆಂದ್ರಪ್ರದೇಶ ಕಡೆಯಿಂದ ಹನೂರು ಕಡೆಗೆ ಹೋಗುತ್ತಿದ್ದ ವಾಹನ ತಡೆದು ಪರಿಶೀಲಿಸಿದಾಗ ಗಾಂಜಾ ಪತ್ತೆಯಾಗಿದೆ.
ಈ ಆರೋಪಿಗಳು ಈಚರ್ ವಾಹನದಲ್ಲಿ ನಾಲ್ಕುಪ್ಲಾಸ್ಟಿಕ್ ಚೀಲಗಳಲ್ಲಿ ಒಟ್ಟು 221 ಕೆ.ಜಿ. ಒಣ ಗಾಂಜವನ್ನು ಪ್ರೈವುಡ್ ಶೀಟ್ ಕೆಳಗಿಟ್ಟು ಸಾಗಿಸುತ್ತಿದ್ದರು.
ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ತೆಗೆದುಕೊಂಡು ಹೋಗುತ್ತಿದ್ದುದಾಗಿ ಆರೊಪಿಗಳು ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದಾರೆ.
ಬಂಧಿತರಿಂದ ಇಪ್ಪತೈದು ಲಕ್ಷ ಬೆಲೆಯ
ಈಚರ್ ಕ್ಯಾಂಟರ್ ವಾಹನ, ಪ್ರೈವುಡ್ ಶೀಟ್‌ಗಳು ಹಾಗೂ 1.10 ಕೋಟಿ ಹೆಚ್ಚು ಬೆಲೆಯ ಗಾಂಜಾ ವಶಪಡಿಸಿಕೊಳ್ಳಲಾಗಿದೆ.