Fri. Dec 27th, 2024

ಏಕೀಕರಣಕ್ಕೆ ಆಲೂರು ವೆಂಕಟರಾಯರ ಕೊಡುಗೆ ಅಪಾರ: ಡಿ. ಟಿ ಪ್ರಕಾಶ್

Share this with Friends

ಮೈಸೂರು,ಜು.12: ಕರ್ನಾಟಕದ ಏಕೀಕರಣಕ್ಕೆ ಆಲೂರು ವೆಂಕಟರಾಯರ ಕೊಡುಗೆ ಅಪಾರವಾದುದು ಎಂದು
ಮೈಸೂರು ನಗರ ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ. ಟಿ ಪ್ರಕಾಶ್ ತಿಳಿಸಿದರು.

ನಾಡಿನ ಗತ ವೈಭವದ ಬಗ್ಗೆ ತಿಳಿಸಿಕೊಟ್ಟು ಏಕೀಕರಣದ ಕಿಚ್ಚನ್ನು ಹತ್ತಿಸಿ ಕನ್ನಡಿಗರ ಬಡಿದೆಬ್ಬಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ಹೇಳಿದರು.

ನಗರದ ಚಾಮುಂಡಿಪುರಂ ವೃತ್ತದಲ್ಲಿರುವ ರಾಮಚಂದ್ರರಾವ್ ಉದ್ಯಾನವನದಲ್ಲಿ
ಆಯೋಜಿಸಿದ್ದ ಆಲೂರು ವೆಂಕಟರಾಯರ 144 ನೇ ಜನುಮದಿನ ಆಚರಣೆ ವೇಳೆ ವಿವಿಧ ಜಾತಿಯ ಗಿಡಗಳನ್ನು ನೆಟ್ಟು ನಂತರ ಮಾತನಾಡಿದ ಅವರು,

ಏಕೀಕರಣಕ್ಕೂ ಮೊದಲ ಕರ್ನಾಟಕ ರಾಜ್ಯ ಹೈದರಾಬಾದ್‌ ಕರ್ನಾಟಕ ಮುಂಬೈ ಕರ್ನಾಟಕ, ಮದ್ರಾಸ್‌ ಕರ್ನಾಟಕಗಳಲ್ಲಿ ಹರಿದು ಹಂಚಿ ಹೋಗಿತ್ತು. ಅದರಂತೆ ಕನ್ನಡ ಪ್ರಾಥಮಿಕ ಶಾಲೆಗಳಲ್ಲಿ ಹೆಚ್ಚಾಗಿ ಮರಾಠಿ ಶಿಕ್ಷಣ ನೀಡಲಾಗುತ್ತಿತ್ತು.

ಇದನ್ನು ಮನಗಂಡ ವೆಂಕಟರಾಯರು ಏಕೀಕರಣ ಚಳವಳಿ ನಡೆಸಲು ತಮ್ಮ ಶಾಲಾ ವಿದ್ಯಾರ್ಥಿ ಸಮಯದಲ್ಲೇ ಮುಂದಾಗಿದ್ದರು
ನಾಡಿನಲ್ಲಿ ರಾಜ್ಯದ ಒಗ್ಗೂಡಿಕೆಗೆ ಪೂರಕ ಕಾರ್ಯಕ್ರಮ ನಡೆಸಿದರು ಎಂದು ಹೇಳಿದರು.

ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷರಾದ ನಾರಾಯಣಗೌಡ ಮಾತನಾಡಿ
ವೆಂಕಟರಾಯರು ರಾಷ್ಟ್ರೀಯ ಶಾಲೆ ಪ್ರಾರಂಭಿಸಿ ಕನ್ನಡಿಗರಿಗೆ ಸ್ವ ಉದ್ಯೋಗ ಮಾಡುವ ಅವಕಾಶ ಮಾಡಿಕೊಟ್ಟಿದ್ದರು ಎಂದು ಸ್ಮರಿಸಿದರು.

ನಗರ ಪಾಲಿಕೆ ಮಾಜಿ ಸದಸ್ಯ ಮಾ ವಿ ರಾಮ್ ಪ್ರಸಾದ್ ಮಾತನಾಡಿ ,25ಕ್ಕೂ ಹೆಚ್ಚು ಕೃತಿಗಳನ್ನು ರಚನೆ ಮಾಡಿದ ಆಲೂರು ವೆಂಕಟರಾಯರು ಬಾಲಗಂಗಾಧರ ತಿಲಕರ ಗೀತಾ ರಹಸ್ಯವನ್ನ ಕನ್ನಡಕ್ಕೆ ಅನುವಾದಿಸಿ ಕನ್ನಡ ಸಾಹಿತ್ಯಕ್ಕೆ ಘನತೆ ಗೌರವ ತಂದುಕೊಟ್ಟವರು ಎಂದು ‌ಹೇಳಿದರು.

ಹಿರಿಯ ಸಾಹಿತಿಗಳಾದ ಪುಷ್ಪ ಅಯ್ಯಂಗಾರ್ ಮಾತನಾಡಿದರು

ಜೆಡಿಎಸ್ ಕಾರ್ಯಾದ್ಯಕ್ಷ ಪ್ರಕಾಶ್ ಪ್ರಿಯದರ್ಶನ್, ಸಮಾಜ ಸೇವಕರಾದ ವಿದ್ಯಾ, ವೈದೇಹಿ, ಭುವನೇಶ್ವರಿ ಸೇವಾ ಟ್ರಸ್ಟ್ ಅಧ್ಯಕ್ಷೆ ನಾಗಶ್ರೀ ಸುಚಿಂದ್ರ, ಸುಚಿಂದ್ರ, ಚಕ್ರಪಾಣಿ, ಬೈರತಿ ಲಿಂಗರಾಜು, ರಾಘವೇಂದ್ರ, ಸೇತುರಾಮ್, ಮಿರ್ಲೆ ಪನೀಶ್ ಮತ್ತಿತರರು ಪಾಲ್ಗೊಂಡಿದ್ದರು.


Share this with Friends

Related Post