Sun. Apr 20th, 2025

ಅಖಿಲ ಕರ್ನಾಟಕ ಒಕ್ಕಲಿಗರ ಸಂಘದಿಂದಕೆ. ಹೆಚ್ ರಾಮಯ್ಯ ಜಯಂತಿ ಆಚರಣೆ

Share this with Friends

ಮೈಸೂರು, ಜು.12: ರಾಜ್ಯ ಒಕ್ಕಲಿಗ ಸಂಫದ ಸಂಸ್ಥಾಪಕರೂ, ಸಮುದಾಯದ ಏಳಿಗೆಗಾಗಿ ಶ್ರಮಿಸಿದ ಮಹಾನ್ ನಾಯಕರಾದ ಕೆ. ಹೆಚ್ ರಾಮಯ್ಯ ಅವರ ಜಯಂತಿಯನ್ನು ಮೈಸೂರಿನಲ್ಲಿ ವಿಶೇಷವಾಗಿ ಆಚರಿಸಲಾಯಿತು.

ಚಾಮುಂಡಿ ಬೆಟ್ಟದ ಪಾದದಲ್ಲಿರುವ ಅವರ ಸ್ಮಾರಕ ಇರುವ ಸ್ಥಳದಲ್ಲಿ ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ರಾಜ್ಯಾಧ್ಯಕ್ಷ ಸಿ. ಜಿ ಗಂಗಾಧರ್ ರವರು ರಾಮಯ್ಯ ರವರ ಸ್ಮಾರಕಕ್ಕೆ ಮಾಲಾರ್ಪಣೆ ಮಾಡಿದರು.

ಈ ವೇಳೆ ಸಿಹಿ ವಿತರಣೆ ಮಾಡಿ ಮಾತನಾಡಿದ ಗಂಗಾಧರ್ ಈಗಿನ ರಾಜಕಾರಣಿಗಳು ಇವರ ಮಾದರಿಯಲ್ಲಿ ನಿಸ್ವಾರ್ಥವಾಗಿ ಜನಸೇವೆ ಮಾಡಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ, ಜಗದೀಶ್, ಶಿವಶಂಕರ್, ಶಿವಲಿಂಗಯ್ಯ, ರಘುರಾಂ, ಹನುಮಂತಯ್ಯ, ಸುಬ್ಬೇಗೌಡ, ಯಶ್ವಂತ್, ಸ್ವಾಮಿ, ರವಿ ಒಲಂಪಿಯ, ತಾರಾಮಣಿ, ರಮೇಶ್, ಕುಮಾರ್ ಗೌಡ ಮತ್ತಿತರರು ಉಪಸ್ಥಿತರಿದ್ದರು


Share this with Friends

Related Post