ಮೈಸೂರು, ಜು.12: ಕನ್ನಡದ ಖ್ಯಾತ ನಿರೂಪಕಿ ಹಾಗೂ ನಟಿ ಅಪರ್ಣಾ ಅವರು ನಿಧನದಿಂದ ಮಾಧ್ಯಮ ಲೋಕಕ್ಕೆ ತುಂಬಲಾರದ ನಷ್ಟ ಎಂದು ನರಸಿಂಹರಾಜಪುರ ಬಸವಕೇಂದ್ರದ ಬಸವಯೋಗಿಪ್ರಭುಗಳು ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.
ಅಪರ್ಣ ಅವರಿಗೆ ಶರಣಾಂಜಲಿಗಳನ್ನು ಸಲ್ಲಿಸಿರುವ ಶ್ರೀಗಳು ಕನ್ನಡ ಭಾಷೆಯನ್ನು ಬಹಳ ಸ್ಪಷ್ಟವಾಗಿ ಮಾತನಾಡುವುದರ ಮೂಲಕ ಎಲ್ಲಾ ನಿರೂಪಕರಿಗೂ ಮಾದರಿಯಾಗಿದ್ದರು ಹೇಳಿದ್ದಾರೆ.
ಸುಮಾರು ಮೂರು ದಶಕಗಳಿಂದಲೂ ಕರ್ನಾಟಕಕ್ಕೆ ಸೇವೆ ಸಲ್ಲಿಸಿದ್ದಾರೆ, ನಮ್ಮೂರ ರಾಜ ಚಿತ್ರದಲ್ಲಿ ವಿಷ್ಣುವರ್ಧನ್ ಅವರ ತಂಗಿ ಪಾತ್ರದಲ್ಲಿ ಅಪರ್ಣಾ ಅವರು ಉತ್ತಮ ಅಭಿನಯ ನೀಡಿದ್ದಾರೆ, ಮಸಣದ ಹೂವು, ಮಜಾ ಟಾಕೀಸ್ ಮುಖಾಂತರ ಎಲ್ಲರ ಮನೆ ಮಾತಾಗಿದ್ದರು ಎಂದು ಬಣ್ಣಿಸಿದ್ದಾರೆ.
ಯಡಿಯೂರು ಸಿದಲಿಂಗೇಶ್ವರ ಧಾರಾವಾಹಿಯಲ್ಲೂ ನಟಿಸಿದ್ದರು.ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಶ್ರೀಗಳು ಪ್ರಾರ್ಥಿಸಿದ್ದಾರೆ.
ಇಂತಹ ಮಹಾನ್ ನಿರೂಪಕಿಗೆ ರಾಜ್ಯ ಸರ್ಕಾರ ಕರ್ನಾಟಕ ರತ್ನ ಪ್ರಶಸ್ತಿ ಕೊಡಬೇಕಿತ್ತು ಎಂದು ಬಸವಕೇಂದ್ರದ ಬಸವಯೋಗಿಪ್ರಭುಗಳು ಹೇಳಿದ್ದಾರೆ.