Mon. Dec 23rd, 2024

ಸಾಲ ತೀರಿಸಲು ಅಕ್ಕನ ಮಗಳ ಮಾರಾಟ ಮಾಡಿದ ಕಿರಾತಕಿ

Share this with Friends

ತುಮಕೂರು, ಜು.13: ಸಾಲ ತೀರಿಸಲಾಗದೆ ಮಹಾ ತಾಯಿಯೊಬ್ಬಳು ಅಕ್ಕನ ಮಗಳನ್ನೇ ಮಾರಾಟ ಮಾಡಿದ ಹೇಯ ಘಟನೆ ಕಲ್ಪತರು ನಾಡು ತುಮಕೂರಿನಲ್ಲಿ ನಡೆದಿದೆ.

ತುಮಕೂರಿನ ದಿಟ್ಟೂರಿನಲ್ಲಿ ನೆಲೆಸಿರುವ ಅಕ್ಕ ಚೌಡಮ್ಮನ ಮಗಳನ್ನು ಹಿಂದೂಪುರದಲ್ಲಿರುವ ತಂಗಿ ಸುಜಾತ ತನಗೆ ಹೆರಿಗೆಯಾಗಿದೆ, ಸ್ವಲ್ಪ ದಿನಗಳ ಕಾಲ ಮಗುವನ್ನು ತನ್ನ ಬಳಿ ಕಳುಹಿಸಿಕೊಡು ಎಂದು ಕೇಳಿಕೊಂಡಿದ್ದಳು.

ಅದರಂತೆ ಬಾಲಕಿಯ ತಾಯಿ ಚೌಡಮ್ಮ ತನ್ನ ಸಹೋದರಿಯ ಮಾತಿಗೆ ಒಪ್ಪಿ ಮಗಳನ್ನು ಕಳಿಸಿದ್ದಳು.

ಬಾಣಂತನ ಮುಗಿದರೂ ಮಗಳು ವಾಪಸು ಬಂದಿರಲಿಲ್ಲ,ಆದ್ದರಿಂದ ಬಾಲಕಿಯ ತಾಯಿ ತಂಗಿಯ ಮನೆಗೆ ಹೋಗಿ ಮಗಳನ್ನು ಕಳಿಸಿಕೊಡುವಂತೆ ಕೇಳಿದ್ದಾರೆ.

ಜತೆಗೆ ಅಲ್ಲಿ ಮಗಳು ಇಲ್ಲದನ್ನ ಕಂಡು ಗಾಬರಿಯಾಗಿ ಮಗಳನ್ನು ತೋರಿಸು ಎಂದು ಒತ್ತಾಯಿಸಿದಾಗ ನಾನು ಸಾಲ ಮಾಡಿಕೊಂಡಿದ್ದೆ ಸಾಲ ತೀರಿಸಲಾಗದೇ 35 ಸಾವಿರಕ್ಕೆ ಮಗಳನ್ನ ಜೀತಕ್ಕಾಗಿ ಮಾರಾಟ ಮಾಡಿದ್ದೇನೆ ಎಂದು ಸುಜಾತ ಹೇಳಿದ್ದಾಳೆ.

ಹಿಂದೂಪುರದ ವ್ಯಕ್ತಿಯೊಬ್ಬ ಬಾತುಕೋಳಿ ಮೇಯಿಸಲು ಬಾಕಿಯನ್ನು ಇರಿಸಿಕೊಂಡಿದ್ದ,ಆತನಲ್ಲಿಗೆ ಬಂದು ಮಗಳನ್ನ ಕಳಿಸುವಂತೆ ಬೇಡಿದರೂ ಆತ ಹಣ ಕೊಟ್ಟು ಬಾಲಕಿಯನ್ನ ಕರೆದುಕೊಂಡು ಹೋಗು ಎಂದು ಹೇಳಿದ್ದಾನೆ.

ಅಲ್ಲಿಂದ ಚೌಡಮ್ಮ ವಾಪಸ್ ತುಮಕೂರಿಗೆ ಬಂದು ಮಗಳ ಬಗ್ಗೆ ಜಿಲ್ಲಾ ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾಳೆ. ಕೂಡಲೇ ಕಾರ್ಮಿಕ ಇಲಾಖೆ ಅಧಿಕಾರಿ ತೇಜಾವತಿ ಜಿಲ್ಲಾ ಎಸ್‌ಪಿ ಅಶೋಕ್‌ ಅವರಿಗೆ ಮಾಹಿತಿ ನೀಡಿ ಬಾಲಕಿಯನ್ನ ರಕ್ಷಿಸಿ ಕರೆತಂದಿದ್ದಾರೆ.

ಈ ಘಟನೆ ಸಂಬಂಧ ತುಮಕೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.


Share this with Friends

Related Post