Mon. Dec 23rd, 2024

ಕೃಷಿ ಹೊಂಡಕ್ಕೆ ಹಾರಿ ಪ್ರೇಮಿಗಳು ಆತ್ಮಹತ್ಯೆ

Share this with Friends

ಚಿಕ್ಕಬಳ್ಳಾಪುರ,ಜು.14: ಕೃಷಿ ಹೊಂಡಕ್ಕೆ ಹಾರಿ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನಲ್ಲಿ ನಡೆದಿದೆ.

ಎಂ.ಮುದ್ದಲಹಳ್ಳಿಯಲ್ಲಿ ಈ ಘಟನೆ ನಡೆದಿದ್ದು,ವೇಣು(21) ಅನುಷಾ (19) ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು.

ವೇಣು ಎಂ.ಮುದ್ದಲಹಳ್ಳಿ ನಿವಾಸಿ, ಅನುಷಾ ಕಾಚಹಳ್ಳಿಯವರು, ಇಬ್ಬರು ಪ್ರೀತಿಸುತ್ತಿದ್ದರು. ಆದರೆ ಬೇರೆ,ಬೇರೆ ಜಾತಿ.ಹಾಗಾಗಿ ಅನುಷಾ ಮನೆಯವರು ಮದುವೆಗೆ ನಿರಾಕರಿಸಿದ್ದರು.

ಜತೆಗೆ ಇತ್ತೀಚೆಗೆ ಅನುಷಾಳನ್ನು ಮನೆಯವರು ಬೇರೊಬ್ಬರಿಗೆ ಕೊಟ್ಟು ವಿವಾಹ ಮಾಡಿದ್ದರು.

ಆಷಾಢ ಮಾಸಕ್ಕೆ ಅನುಷಾ ತವರಿಗೆ ಬಂದಿದ್ದಳು.ಆಗ ಎಂ.ಮುದ್ದಲಹಳ್ಳಿಗೆ ಹೋಗಿ ಪ್ರಿಯಕರ ವೇಣುವನ್ನು ಭೇಟಿ ಮಾಡಿ ಮಾತನಾಡಿಸಿದ್ದಾಳೆ,ಅದೇನಾಯಿತೊ
ನಂತರ ಇಬ್ಬರೂ ಜಮೀನಿನ ಬಳಿ ಬಂದು ಕೃಷಿ ಹೊಂಡಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸ್ಥಳಕ್ಕೆ ಕೆಂಚಾರ್ಲಹಳ್ಳಿ ಠಾಣೆ ಪೊಲೀಸರು ಭೇಟಿ ನೀಡಿ ಮೃತ ದೇಹಗಳನ್ನು ಹೊರ ತೆಗೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.


Share this with Friends

Related Post