Sun. Apr 20th, 2025

ಕೆಆರ್‌ಎಸ್ ಗೆ ಒಳಹರಿವು ಹೆಚ್ಚಳ:105.40 ಅಡಿ ಭರ್ತಿ

Share this with Friends

ಮಂಡ್ಯ,ಜು.15: ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಜೋರಾದ ಕಾರಣ ರೈತರ ಜೀವನಾಡಿ ಕೆಆರ್‌ಎಸ್ ಅಣೆಕಟ್ಟೆಗೆ ಒಳ ಹರಿವು ಹೆಚ್ಚಾಗಿದೆ.

ನಿನ್ನೆಯಿಂದ ಕೊಡಗು ಭಾಗದಲ್ಲಿ ಭಾರೀ ಮಳೆ ಬೀಳುತ್ತಿದ್ದು, 10,124 ಕ್ಯುಸೆಕ್‌ ನೀರು‌ ಹರಿದು ಬರುತ್ತಿದೆ.

ಗರಿಷ್ಠ 124.80 ಅಡಿ ಎತ್ತರ ಇರುವ ಜಲಾಶಯದಲ್ಲಿ 105.40 ಅಡಿ ಭರ್ತಿಯಾಗಿದೆ. 49.452 ಟಿಎಂಸಿ ಗರಿಷ್ಠ ಸಾಮರ್ಥ್ಯದ ಕೆಆರ್‌ಎಸ್‌ನಲ್ಲಿ 27.347 ಟಿಎಂಸಿ ನೀರು ಶೇಖರಣೆಯಾಗಿದೆ.

ಡ್ಯಾಂನಿಂದ‌ ಕುಡಿಯುವ ನೀರಿಗೆ ಹಾಗೂ ನಾಲೆಗಳಿಗೆ 2,260 ಕ್ಯುಸೆಕ್‌ ನೀರು ಬಿಡುಗಡೆ ಮಾಡಲಾಗಿದೆ.

ಕಬಿನಿ ಮತ್ತು ಹಾರಂಗಿ ಜಲಾಶಯದಿಂದಲೂ ನದಿಗೆ ನೀರು ಬಿಡುತ್ತಿರುವ ಕಾರಣ ಕೆಆರ್‌ಎಸ್‌ ಒಳ ಹರಿವು ಹೆಚ್ಚಾಗುತ್ತಿದೆ.


Share this with Friends

Related Post